Asianet Suvarna News Asianet Suvarna News

ಕೊರೋನಾ 3ನೇ ತಡೆಯಲು ಸ್ವಯಂ-ಪರೀಕ್ಷಾ ಕಿಟ್ ಪರಿಣಾಮಕಾರಿ!

Sep 23, 2021, 3:12 PM IST

ಬೆಂಗಳೂರು(ಸೆ.23): ಕೊರೋನಾ ಮೂರನೇ ಅಲೆ ಎದುರಿಸುವಲ್ಲಿ ಸ್ವಯಂ-ಪರೀಕ್ಷಾ ಕಿಟ್‌ಗಳು ಬಹಳ ಪರಿಣಾಮಕಾರಿ ಸಾಧನ. ಭಾರತ ಕೊರೋನಾದ ಮೂರನೇ ಅಲೆ ಎದುರಿಸುವ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಸುತ್ತಿರುವ ಈ ಸಂದರ್ಭದಲ್ಲಿ ಅದನ್ನು ಎದುರಿಸಲು ನಾವು ಅಗತ್ಯ ತಯಾರಿ ನಡೆಸಬೇಕು. ಇಂತಹ ಆತಂಕದ ಪರಿಸ್ಥಿತಿ ಎದುರಿಸಲು ನಮ್ಮ ಬಳಿ ಇರುವ ಅತ್ಯಂತ ಪ್ರಬಲ ಸಾಧನವೆಂದರೆ ಸ್ವಯಂ-ಪರೀಕ್ಷಾ ಕಿಟ್‌ಗಳು.

ಹೀಗಿರುವಾಗ ಪ್ರಸ್ತುತ ಪರಿಸ್ಥಿತಿ, ಮೂರನೇ ಅಲೆಯ ಆತಂಕ ಮತ್ತು ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಗಾಗಿ ಸ್ವಯಂ ಪರೀಕ್ಷಾ ಕಿಟ್‌ಗಳು ಹೇಗೆ ಸಹಾಯ ಮಾಡಬಲ್ಲವು ಎಂದು ಅರಿಯುವ ನಿಟ್ಟಿನಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ಮತ್ತು ಶ್ವಾಸಕೋಶ ಕಸಿ ವೈದ್ಯ ವಿಭಾಗದ ಮುಖ್ಯಸ್ಥ ಹಾಗೂ ಸಲಹೆಗಾರ ಡಾ.ಸತ್ಯನಾರಾಯಣ್ ಮೈಸೂರು ಇವರೊಂದಿಗೆ ಸಂವಾದ ನಡೆಸಿದೆ.