ಮಹಿಳೆಯ ಗ್ಯಾಂಗ್ ರೇಪ್ ನಾಟಕ: ಸಾಲದ ವಿಚಾರಕ್ಕೆ ಸುಳ್ಳು ಕಥೆ?
ಹಾವೇರಿ (ಏ.17): ಮಹಿಳೆಯಿಂದ ಗ್ಯಾಂಗ್ ರೇಪ್ ಹೈ ಡ್ರಾಮಾ ಮಾಡಿರುವ ಘಟನೆ ನಡೆದಿದೆ. ಗ್ಯಾಂಗ್ ರೇಪ್ ಕಥೆ ಕಟ್ಟಿ ಪೊಲೀಸರಿಗೇ ಟೆನ್ಷನ್ ಕೊಟ್ಟಿದ್ದಾರೆ. ಸಾಲದ ವಿಚಾರವಾಗಿ ನಡೆದ ಗಲಾಟೆಗೆ ಗ್ಯಾಂಗ್ ರೇಪ್ ಬಣ್ಣ ಕಟ್ಟಿದ ಮಹಿಳೆ ಫೀರಾಂಬಿ. ಫೀರಾಂಬಿ ಅವರು ಬ್ಯಾಡಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದ ಮಹಿಳೆ ಆಗಿದ್ದಾರೆ. ಬೆಳ್ಳಂಬೆಳಿಗ್ಗೆ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಪೊಲೀಸರ ಬಳಿ ಬಂದಿದ್ದ ಫೀರಾಂಬಿ. ಗಾಯಗೊಂಡ ಸ್ಥಿತಿಯಲ್ಲಿದ್ದ ಫೀರಂಬಿ ಮುಖ, ಗದ್ದದ ಭಾಗದಲ್ಲಿ ಗಾಯಗಳಾಗಿದ್ದು ನೋಡಿ ಬ್ಯಾಡಗಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದ ಪೊಲೀಸರು, ಮಾದ್ಯಮಗಳಿಗೆ ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಹೇಳಿಕೆ ನೀಡಿದ್ದ ಫೀರಂಭಿ. ಆದರೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ ಬಳಿಕ ಸತ್ಯ ಒಪ್ಪಿಕೊಂಡಿದ್ದಾಳೆ.
ಘಟನೆ ಹಿನ್ನಲೆ ಏನು?
ಜಯಪ್ಪ ಹರಿಜನ ಎಂಬುವರಿಂದ 35,000 ರೂಪಾಯಿ ಸಾಲ ಪಡೆದಿದ್ದ ಫೀರಾಂಬಿ. ಗುಡ್ಡಪ್ಪ ಆಡಿನವರ ಎಂಬ ವ್ಯಕ್ತಿ ಭರವಸೆ ಮೇಲೆ ಜಯಪ್ಪ ಫೀರಂಭಿಗೆ ಸಾಲ ನೀಡಿದ್ದರು. ಇದೇ ವಿಚಾರವಾಗಿ ಫಿರಾಂಬಿ ಫರಿದಾಬಾನು ಎಂಬ ಮತ್ತೋರ್ವ ಮಹಿಳೆ ಹಾಗೂ ಸಾಲ ಕೊಡಿಸಿದ್ದ ಗುಡ್ಡಪ್ಪ ಅವರ ಸೊಸೆ ಜೊತೆ ಜಗಳ ಮಾಡಿದ್ದಳು. ನಿನ್ನೆ ಸಂಜೆ ಫೀರಾಂಬಿ ಜೊತೆ ಬ್ಯಾಡಗಿಯಲ್ಲಿ ಫರಿದಾಬಾನು ಹಾಗೂ ಗುಡ್ಡಪ್ಪ ಅವರ ಸೊಸೆ ಜಗಳ ಮಾಡಿದ್ದರು.
ಜಗಳದ ವೇಳೆ ತಮ್ಮ ಮೇಲೆ ಹಲ್ಲೆ ಮಾತ್ರ ನಡೆದಿದೆ. ತಮ್ಮ ಮೇಲೆ ಗ್ಯಾಂಗ್ ರೇಪ್ ನಡೆದಿಲ್ಲ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿರುವ ಫೀರಂಬಿ. ಆದರೆ,ಬೆಳಿಗ್ಗೆ ಗ್ಯಾಂಗ್ ರೇಪ್ ಮಾಡಿರೋದಾಗಿ ದೂರು ನೀಡಲು ಬಂದಿದ್ದ ಫೀರಂಬಿ. ಪೊಲೀಸರ ವಿಚಾರಣೆ ಫರಿದಾಬಾನು ಹಾಗೂ ಗುಡ್ಡಪ್ಪ ಅವರ ಕುಟುಂಬಸ್ಥರ ಮೇಲಿನ ಸಿಟ್ಟಿನಿಂದ ಗ್ಯಾಂಗ್ ರೇಪ್ ಎಂದು ಸುಳ್ಳು ದೂರು ನೀಡಲು ಬಂದಿರೋದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇಡೀ ದಿನ ಸುಳ್ಳು ಕಥೆ ಕಟ್ಟಿ ಪೊಲೀಸರಿಗೆ ಟೆನ್ಷನ್ ಕೊಟ್ಟ ಲೇಡಿ, ಅಪರಿಚಿತರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಕಿಡ್ನಾಪ್ ಮಾಡಿದರು. ಬಳಿಕ ಗ್ಯಾಂಗ್ ರೇಪ್ ಮಾಡಿರೋದಾಗಿ ಹೇಳಿಕೆ ನೀಡಿದ್ದಳು. ಫೀರಾಂಬಿ ಹೈಡ್ರಾಮಾಗೆ ಬ್ಯಾಡಗಿ ಪೊಲೀಸರು ಹೈರಾಣಾಗಿದ್ದರು.