ಪುಟ್ಟ ಮರಿಯೊಂದಿಗೆ ರಸ್ತೆ ದಾಟುತ್ತಿರುವ ಕಾಡಾನೆ: ವಿಡಿಯೋ ವೈರಲ್

ಹಾಸನ: ತಾಯಿ ಆನೆಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ 

First Published Jun 29, 2022, 4:50 PM IST | Last Updated Jun 29, 2022, 4:50 PM IST

ಹಾಸನ: ತಾಯಿ ಆನೆಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಲಸಾವರ ಬಳಿ ಈ ಘಟನೆ ನಡೆದಿದೆ. ಕಾಡಾನೆ ಹಾಗೂ ಮರಿಯನ್ನು ನೋಡಿದ ಜನರು ಜೋರಾಗಿ ಬೊಬ್ಬೆ ಹಾಕಿದ್ದು, ಇದರಿಂದ ಬೆದರಿದ ತಾಯಿ ಹಾಗೂ ಮರಿ ಒಂದೇ ಸಮನೆ ಓಡುತ್ತಿರುವುದು ಕಂಡು ಬಂದಿದೆ. ತಾಯಿ ಆನೆ ಘೀಳಿಡುತ್ತಾ ಮರಿಯೊಂದಿಗೆ ಕಾಫಿ ತೋಟದ ಒಳಗೆ ಸಾಗುವುದು ಕಂಡು ಬಂದಿದೆ.