Asianet Suvarna News Asianet Suvarna News

ಫಿಫಾ ವಿಶ್ವಕಪ್ ಗೆದ್ದ ಮೆಸ್ಸಿಯಿಂದ ಮತ್ತೊಂದು ಗುಡ್‌ನ್ಯೂಸ್, ಅಭಿಮಾನಿಗಳು ಫುಲ್ ಖುಷ್!

36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡಕ್ಕೆ ಫಿಫಾ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಲಿಯೋನಲ್ ಮೆಸ್ಸಿ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಮೆಸ್ಸಿ ಸಿಹಿ ಸುದ್ದಿಗೆ ಇದೀಗ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ.

ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಸಾಮ್ರಾಟನಾಗಿದೆ. ಫ್ರಾನ್ಸ್ ವಿರುದ್ದ ಗೆದ್ದು ಬೀಗಿದ ಲಿಯೋನಲ್ ಮೆಸ್ಸಿ ಪಡೆ ಟ್ರೋಫಿಯೊಂದಿಗೆ ಸಂಭ್ರಮಾಚರಣೆಯಲ್ಲಿದೆ. ಟ್ರೋಫಿ ಗೆದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದ್ದಾರೆ. ಹೌದು, ಫಿಫಾ ವಿಶ್ವಕಪ್ ಗೆದ್ದ ಬೆನ್ನಲ್ಲೇ ಎದ್ದ ನಿವೃತ್ತಿ ವದಂತಿಗಳಿಗೆ ಮೆಸ್ಸಿ ಸ್ಪಷ್ಟನೆ ನೀಡಿದ್ದಾರೆ. ನಿವೃತ್ತಿ ವದಂತಿಗಳನ್ನು ತಳ್ಳಿ ಹಾಕಿರುವ ಮೆಸ್ಸಿ ಮತ್ತೆ ಫುಟ್ಬಾಲ್ ಮೈದಾನದಲ್ಲಿ ಮಿಂಚಿನ ಗೋಲುಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುವ ಭರವಸೆ ನೀಡಿದ್ದಾರೆ. 2016ರಲ್ಲಿ ಮೆಸ್ಸಿ ನಿವೃತ್ತಿ ಘೋಷಿಸಿದ್ದರು. ಆದರೆ ಹಲವರ ಒತ್ತಾಯಕ್ಕೆ ಮಣಿದು ನಿವೃತ್ತಿ ಹಿಂಪಡೆದಿದ್ದರು. ಇದೀಗ 36 ವರ್ಷಗಳ ಬಳಿಕ ವಿಶ್ವಕಪ್ ಗೆಲುವಿನಲ್ಲಿ ಮೆಸ್ಸಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Video Top Stories