ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಟ್ರೇಡ್‌ಮಾರ್ಕ್, ಟೇಸ್ಟ್‌ ಮಾಡಲು ಮುಗಿಬಿದ್ದಿದ್ದಾರೆ ಅಮೆರಿಕನ್ಸ್‌!

ಇಡ್ಲಿ ಸಾಂಬಾರ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ,  ಹಬೆಯಲ್ಲಿ ಬೇಯುವ ಇಡ್ಲಿ ಆಹಾರಕ್ಕೂ ಬೆಸ್ಟ್.. ಆರೋಗ್ಯಕ್ಕೂ ದ ಬೆಸ್ಟ್! ಇದೀಗ ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಟ್ರೇಡ್ಮಾರ್ಕ್ ಪಡೆಯಲಾಗಿದೆ. 

First Published Oct 3, 2021, 11:24 AM IST | Last Updated Oct 3, 2021, 11:30 AM IST

ಉಡುಪಿ (ಅ. 03): ತಿಂದವರೆ ಬಲ್ಲರು ಉಡುಪಿ ಇಡ್ಲಿಯ ರುಚಿಯ!  ತನ್ನದೇ ಯೂನಿಕ್ ಟೇಸ್ಟ್ ಹೊಂದಿರುವ ಉಡುಪಿ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಗೆ ಡಿಪ್ ಮಾಡಿದ ತುಂಡು ಇಡ್ಲಿಯನ್ನು ಬಾಯಿಗೆ ಇಟ್ಟರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು ಅಂತ ಫೀಲ್ ಸಿಗುತ್ತೆ. ಇದೀಗ  ಉಡುಪಿ ಇಡ್ಲಿಗೆ 12,461 ಕಿ. ಮೀ. ದೂರದ ಅಮೆರಿಕದಲ್ಲಿ ಬ್ರ್ಯಾಂಡ್, ಟ್ರೇಡ್ ಮಾರ್ಕಿನ ಗೌರವ, ಸ್ಥಾನಮಾನ ದೊರೆತಿದೆ. 

ಇದು ಇಡ್ಲಿ ಕ್ಯಾಂಡಿ..! ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರ

ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್‌ನವರು ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ ಮಾರ್ಕ್ ಪಡೆದಿದ್ದು ಆನ್‍ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿ, ಪ್ಯಾಕೆಟ್ ನಲ್ಲಿ ಚಟ್ನಿ, ಸಾಂಬಾರ್ ನ್ನು ಭಾರತೀಯರು, ಅಮೆರಿಕನ್ನರು ಮೈಕ್ರೊ ಓವನ್‍ನಲ್ಲಿ ಬಿಸಿ ಮಾಡಿ ತಿಂದು ಖುಷಿಪಡುತ್ತಿದ್ದಾರೆ. ಕಾಲು ಕೆ.ಜಿ.(ಆರು) ಇಡ್ಲಿಗೆ 1.99ಡಾಲರ್(150ರೂ.), 24ಇಡ್ಲಿಗಳ ಫ್ಯಾಮಿಲಿ ಪ್ಯಾಕಿಗೆ 4.99 ಡಾಲರ್ (375ರೂ.) ದರವಿದ್ದು ಹಾಟ್ ಕೇಕ್ ನಂತೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಬ್ರ್ಯಾಂಡ್, ಟ್ರೇಡ್ ಮಾರ್ಕ್ ಆಯಾ ದೇಶಕ್ಕೆ ಸೀಮಿತವಾಗಿದ್ದರೂ ಜಾಗತಿಕ ಒಪ್ಪಂದಕ್ಕೆ ಅನುಗುಣವಾಗಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ಇದೆ.