ಸಾಸ್‌ ರೇಟ್‌ ಹೆಚ್ಚಿಸಿದ್ದಕ್ಕೆ ಯುವತಿಯರಿಂದ ರೆಸ್ಟೋರೆಂಟ್‌ನಲ್ಲಿ ದಾಂಧಲೆ

ಸಾಸ್‌ ರೇಟ್ ಜಾಸ್ತಿ ಮಾಡಿದರು ಎಂದು ಹೇಳಿ ಯುವತಿಯರ ಗುಂಪೊಂದು ಹೊಟೇಲ್‌ನಲ್ಲಿ ದಾಂಧಲೆ ನಡೆಸಿದೆ

First Published Jul 13, 2022, 5:55 PM IST | Last Updated Jul 13, 2022, 5:55 PM IST

ಸಾಸ್‌ ರೇಟ್ ಜಾಸ್ತಿ ಮಾಡಿದರು ಎಂದು ಹೇಳಿ ಯುವತಿಯರ ಗುಂಪೊಂದು ಹೊಟೇಲ್‌ನಲ್ಲಿ ದಾಂಧಲೆ ನಡೆಸಿದ್ದಾರೆ. ಸಾಸ್‌ ರೇಟ್‌ ಜಾಸ್ತಿಯಾಗಿದ್ದಕ್ಕೆ ಆಕ್ರೋಶಗೊಂಡ ಯುವತಿಯರು ರೆಸ್ಟೋರೆಂಟ್‌ನಲ್ಲಿದ್ದ ವಸ್ತುಗಳನ್ನೆಲ್ಲಾ ಕ್ಯಾಶ್‌ ಕೌಂಟರ್‌ನಲ್ಲಿದ್ದ ವ್ಯಕ್ತಿಯ ಮೇಲೆ ಹಾಗೂ ನೆಲಕ್ಕೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್‌ನ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಹೊಟೇಲ್‌ಗೆ ಬಂದ ಯುವತಿಯರ ಗುಂಪು ತಮಗೆ ಬೇಕಾದನ್ನು ಆರ್ಡರ್ ಮಾಡಿದ್ದಾರೆ. ಆದರೆ ಈ ವೇಳೆ ಸಾಸ್‌ಗೆ 1.85 ಡಾಲರ್ ಹೆಚ್ಚು ಮಾಡಿದ್ದಕ್ಕೆ ಮಹಿಳೆಯರು ಒಮ್ಮೆಲೇ ಸಿಟ್ಟಿಗೆದ್ದು ಈ ಕೃತ್ಯವೆಸಗಿದ್ದಾರೆ.