ಆಹಾರ ಮೇಳ 'ಸಹಕಾರ ಸಂಭ್ರಮ'ಕ್ಕೆ ಅದ್ದೂರಿ ರೆಸ್ಪಾನ್ಸ್

ಬೆಂಗಳೂರಿನ ಸಹಕಾರನಗರದಲ್ಲಿ ಸುವರ್ಣ ನ್ಯೂಸ್- ಕನ್ನಡಪ್ರಭ ವತಿಯಿಂದ ಆಹಾರ ಮೇಳ ಆಯೋಜಿಸಲಾಗಿದ್ದು, ಇದಕ್ಕೆ ಆಹಾರ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ. 

First Published Mar 26, 2022, 10:44 AM IST | Last Updated Mar 26, 2022, 10:44 AM IST

ವೆರೈಟಿ ವೆರೈಟಿ ಫುಡ್ ಯಾರಿಗೆ ತಾನೇ ಇಷ್ಟವಿಲ್ಲ? ಅದ್ರಲ್ಲೂ ಉತ್ತರ ಕರ್ನಾಟಕದ ಆಹಾರ, ಉತ್ತರ ಭಾರತದ ಆಹಾರ, ಮಲೆನಾಡಿನ ವಿಶೇಷ ತಿನಿಸುಗಳು, ಕೊಡಗು ಮೈಸೂರಿನ ಬಗೆ ಬಗೆ ಸವಿರುಚಿಗಳು ಸೇರಿದಂತೆ ಎಲ್ಲವೂ ಒಂದೆಡೆಯೇ ಸಿಕ್ರೇ.. ಈ ದೇಹವೇ ಆಹಾ ದೊರಕಿದೆ ನವರಸಗಳ ರುಚಿ ಸವಿಯಲು.. ಇವನ್ನೆಲ್ಲ ತಿಂದುಂಡು ಮನಸ್ಸು ತೃಪ್ತವಾದ ಮೇಲೆ ಒಂದಿಷ್ಟು ವಸ್ತ್ರ, ಒಡವೆ, ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದು ಕೂಡಾ ಮಜವೇ. ಈ ಎಲ್ಲವೂ ಸಾಧ್ಯವಾಗುತ್ತಿರುವುದು ಸಹಕಾರ ನಗರದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ. 

ನಾನ್‌ವೆಜ್‌ ಕಡಿಮೆ ತಿನ್ನಿ, ವೆಜ್ ಜಾಸ್ತಿ ತಿನ್ನಿ..ತೂಕ ಬೇಗ ಕಡಿಮೆಯಾಗುತ್ತೆ

ಸುವರ್ಣ ನ್ಯೂಸ್ ಕನ್ನಡಪ್ರಭ ವತಿಯಿಂದ ಆಯೋಜಿಸಿರುವ ಸಹಕಾರ ನಗರ ಮೈದಾನದಲ್ಲಿ ನಡೆಯುತ್ತಿರುವ ಸಹಕಾರ ಸಂಭ್ರಮ ಆಹಾರ ಮೇಳಕ್ಕೆ ಇಲ್ಲಿನ ಮಾಜಿ ಕಾರ್ಪೋರೇಟರ್ ಮುನೀಂದ್ರ ಕುಮಾರ್ ಚಾಲನೆ ನೀಡಿದ್ದಾರೆ. ಮೇಳಕ್ಕೆ ಮೊದಲ ದಿನದಿಂದಲೇ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದ್ದು, ಮಾ.27ರವರೆಗೆ ಇದು ಮುಂದುವರಿಯಲಿದೆ. 

Video Top Stories