ಮಠ-ಮಂದಿರಗಳಲ್ಲಿ ಊಟ ಮಾಡುವುದರ ಹಿಂದಿನ ಮಹತ್ವ ಏನು?; ಡಾ. ಹೆಚ್.ಎಸ್ ಪ್ರೇಮಾ ಹೇಳಿದ್ದೇನು?

ದೇವಸ್ಥಾನ ಮತ್ತು ಮಠಗಳಲ್ಲಿ ಯಾಕೆ ಊಟ ಮಾಡಬೇಕು ಎಂಬ ಪ್ರಶ್ನೆಯೇ ವಿಚಿತ್ರ ಎಂದು ಡಯಟೇಶಿಯನ್ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು. ಈ ಕುರಿತು ಅವರು ವಿವರವಾಗಿ ಮಾತನಾಡಿದ್ದಾರೆ.

First Published Jul 14, 2023, 5:56 PM IST | Last Updated Jul 14, 2023, 5:56 PM IST

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಠ-ಮಂದಿರಗಳಿಗೆ ಪ್ರಮುಖ ಪ್ರಾಮುಖ್ಯತೆ ಇದೆ ಎಂದು ಹೆಚ್.ಎಸ್ ಪ್ರೇಮಾ ಹೇಳಿದರು. ಸರ್ವೇ ಜನಾ ಸುಖಿನೋ ಭವಂತು ಎಂಬ ಭಾವದಲ್ಲಿ ಮಠ ಹಾಗೂ ದೇವಾಲಯಗಳಲ್ಲಿ ಊಟ ಹಾಕಲಾಗುತ್ತದೆ. ಮಠಕ್ಕೆ ಬರುವವರು ಹಸಿದ ಹೊಟ್ಟೆಯಲ್ಲಿ ಹಿಂದುರುಗಿಬಾರದು ಎಂಬ ಕಾರಣಕ್ಕೆ ಅಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿರುತ್ತದೆ. ನಮ್ಮನ್ನು ನಾವು ಭಗವಂತನಿಗೆ ಸಮರ್ಪಿಸಿಕೊಳ್ಳಲು ಬರೀ ಹೊಟ್ಟೆಯಲ್ಲಿ ಭಕ್ತರು ದೇವಾಲಯಕ್ಕೆ ಹೋಗುತ್ತಾರೆ. ಏಕಾಗ್ರತೆಯಿಂದ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ. ನಾವು ದೇವರನ್ನು ಪ್ರಾರ್ಥಿಸಿದ ಮೇಲೆ ನಮಗೆ ಅಲ್ಲಿ ಪ್ರಸಾದವನ್ನು ಭಗವಂತ ನಮಗೆ ಕೊಡುತ್ತಾನೆ. ಅಲ್ಲಿ ಯಾರೇ ಪ್ರಸಾದ ಕೊಟ್ಟರೂ ಅದು ಭಗವಂತನೇ ಕೊಟ್ಟ ಹಾಗೆ ಎಂದು ಅವರು ಹೇಳಿದರು. ಇದರಿಂದ ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಮನಸ್ಸು ಶುದ್ಧಿ ಆಗಲಿದೆ ಎಂದು ತಿಳಿಸಿದರು.

Video Top Stories