ಸಾಯಿಸಲು ಬಂದ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ಹೇಗೆ..?
ಒಂದು ದಿನ ಯಶೋಧೆ ಕೃಷ್ಣನನ್ನು ಮಡಿಲಲ್ಲಿ ಇಟ್ಟುಕೊಂಡು ಮುದ್ದು ಮಾಡುತ್ತಿರುತ್ತಾಳೆ. ಇದ್ದಕ್ಕಿದ್ದಂತೆ ಮಗು ಭಾರವಾಗುತ್ತಾ ಹೋಗುತ್ತದೆ. ಮಗುವನ್ನು ಎತ್ತಿ ನೆಲಕ್ಕೆ ಕೂರಿಸಿ, ಮನೆಯೊಳಗೆ ಹೋಗುತ್ತಾಳೆ. ಆಗ ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸುತ್ತದೆ.
ಒಂದು ದಿನ ಯಶೋಧೆ ಕೃಷ್ಣನನ್ನು ಮಡಿಲಲ್ಲಿ ಇಟ್ಟುಕೊಂಡು ಮುದ್ದು ಮಾಡುತ್ತಿರುತ್ತಾಳೆ. ಇದ್ದಕ್ಕಿದ್ದಂತೆ ಮಗು ಭಾರವಾಗುತ್ತಾ ಹೋಗುತ್ತದೆ. ಮಗುವನ್ನು ಎತ್ತಿ ನೆಲಕ್ಕೆ ಕೂರಿಸಿ, ಮನೆಯೊಳಗೆ ಹೋಗುತ್ತಾಳೆ. ಆಗ ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸುತ್ತದೆ. ಕೃಷ್ಣನನ್ನು ಎತ್ತಿಕೊಂಡು ಹೋಗಿ ರಾಕ್ಷಸನೊಬ್ಬ ಸಾಯಿಸಲು ನೋಡುತ್ತಿದ್ದಾನೆ.
ಆಗ ಬಾಲ ಕೃಷ್ಣ ರಾಕ್ಷಸನ ಕತ್ತನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ಬಿಗಿತ ಹೆಚ್ಚಾಗುತ್ತಾ ಹೋದಂತೆ ರಾಕ್ಷಸ ನಲುಗಿ ಹೋಗುತ್ತಾನೆ. ಹಾಗೆ ರಾಕ್ಷಸನನ್ನು ಕೈ ಬಿಡುತ್ತಾನೆ. ನೆಲಕ್ಕೆ ಬಿದ್ದು ರಾಕ್ಷಸ ಸಾವನ್ನಪ್ಪುತ್ತಾನೆ. ಇತ್ತ ಮಗು ಕಾಣದೇ ಕಂಗಾಲಾಗಿದ್ದ ಯಶೋಧೆಗೆ, ಸುರಕ್ಷಿತವಾಗಿ ಮಗು ಕೈ ಸೇರುತ್ತಿದೆ. ಇದು ಕೃಷ್ಣನ ಲೀಲೆಗಳಲ್ಲಿ ಒಂದಾಗಿದೆ.