ದೂರ್ವಾಸರ ಮಂತ್ರ ಪರೀಕ್ಷಿಸಲು ಹೋಗಿ ಕರ್ಣನ ಹುಟ್ಟಿಗೆ ಕಾರಣಳಾದಳು ಕುಂತಿ!
ಕುಂತಿದೇವಿ ಮದುವೆಗೆ ಮುನ್ನ ದೂರ್ವಾಸರಿಗೆ ಸೇವೆ ಮಾಡುತ್ತಿದ್ದಾಗ, ಆ ಸೇವೆಯನ್ನು ಮೆಚ್ಚಿ ದೂರ್ವಾಸರು ದಿವ್ಯ ಮಂತ್ರವನ್ನು ಉಪದೇಶಿಸುತ್ತಾರೆ. ಅದು ಸಂತಾನವನ್ನು ಪ್ರಸಾದಿಸುವ ಮಂತ್ರವಾಗಿರುತ್ತದೆ.
ಕುಂತಿದೇವಿ ಮದುವೆಗೆ ಮುನ್ನ ದೂರ್ವಾಸರಿಗೆ ಸೇವೆ ಮಾಡುತ್ತಿದ್ದಾಗ, ಆ ಸೇವೆಯನ್ನು ಮೆಚ್ಚಿ ದೂರ್ವಾಸರು ದಿವ್ಯ ಮಂತ್ರವನ್ನು ಉಪದೇಶಿಸುತ್ತಾರೆ. ಅದು ಸಂತಾನವನ್ನು ಪ್ರಸಾದಿಸುವ ಮಂತ್ರವಾಗಿರುತ್ತದೆ. ಕುಂತಿ ದೇವಿ ಅದನ್ನು ಪರೀಕ್ಷಿಸಲು ಹೋಗುತ್ತಾಳೆ. ತಕ್ಷಣ ಸೂರ್ಯದೇವ ಪ್ರತ್ಯಕ್ಷನಾಗಿ ಪುತ್ರನನ್ನು ಅನುಗ್ರಹಿಸಿ ಅದೃಶ್ಯನಾಗುತ್ತಾನೆ. ಆತನೇ ಕರ್ಣ. ಲೋಕನಿಂದೆಗೆ ಹೆದರಿ, ಆ ಮಗುವನ್ನು ಗಂಗೆಯಲ್ಲಿ ತೇಲಿ ಬಿಡುತ್ತಾಳೆ. ಮುಂದೆ ಕರ್ಣ ಕೌರವರ ಪಾಳಯ ಸೇರಿಕೊಳ್ಳುತ್ತಾನೆ. ಹೀಗೆ ಮಹಾಭಾರತದಲ್ಲಿ ಕರ್ಣನ ಹುಟ್ಟಿನ ಬಗ್ಗೆ ಈ ಕಥೆಯಿದೆ.