Asianet Suvarna News Asianet Suvarna News

ಒಂದೇ ಸಲಕ್ಕೆ ನಾಯಿಯ ಬಾಯಿಗೆ 5 ಬಾಣ ಹೂಡಿದ ಏಕಲವ್ಯ

Sep 16, 2021, 3:34 PM IST

ದೃತರಾಷ್ಟ್ರನ ಮಕ್ಕಳು ಪಾಂಡು ಮಕ್ಕಳು. ಕೌರವರು 100 ಜನ ಪಾಂಡವರು 5 ಜನರು ಹೊರಡುತ್ತಾರೆ. ಅವರ ಜೊತೆಗೆ ಬೇಟೆ ನಾಯಿಗಳೂ ಇದ್ದವು. ಹಿಂದಿನ ಕಾಲದಲ್ಲಿ ರಾಜರು ನಾಯಿಗಳನ್ನೂ ಒಯ್ಯುತ್ತಿದ್ದರು. ಸೈನಿಕರೂ ಇದ್ದರು. ರಾಜಕುಮಾರರು ಎಲ್ಲರೂ ಸೈನಿಕರೊಂದಿಗೆ ಸ್ವಚ್ಛಂದವಾಗಿ ತಿರುಗಾಡುತ್ತಿರುತ್ತಾರೆ.

ಪಾಂಡವ, ಕೌರವರಿಗೆ ಗುರುಗಳಾದ ದ್ರೋಣಾಚಾರ್ಯ

ಆಗ ಒಂದು ಬೇಟೆ ನಾಯಿ ತಪ್ಪಿಸಿಕೊಂಡು ಏಕಲವ್ಯ ಹತ್ತಿರ ಬಂದು ಬೊಗಳುತ್ತದೆ. ಇದರಿಂದ ಏಕಲವ್ಯನ ಸಾಧನೆಗೆ ಭಂಗವಾಗಿ ಒಂದೇ ಸಲಕ್ಕೆ 5 ಬಾಣ ಹೂಡಿ ನಾಯಿಯ ಬಾಯಿ ಬಂಧಿಸುತ್ತಾನೆ. ಅದರ ಬಾಯಿ ಒಳಗೆ 5 ಬಾಣ ಹೂಡಿ ಬಾಯಿ ಮುಚ್ಚಿಸಿದಾತ ಅಷ್ಟು ನಿಪುಣ ಯಾರಿರಬಹುದೆಂಬ ಕುತೂಹಲ ಮೂಡುತ್ತದೆ. ನಾಯಿಗೆ ಗಾಯವೂ ಆಗಿರುವುದಿಲ್ಲ, ನೋವಾಗಿರುವುದಿಲ್ಲ