ಮಹಾಭಾರತ: ಭೀಷ್ಮ ನಿಗೆ ಇಚ್ಛಾಮರಣ ವರ ಸಿಕ್ಕಿದ್ಹೇಗೆ.?
ತಂದೆ ಶಂತನು ಚಿಂತಾಕ್ರಾಂತನಾಗಿರುವುದನ್ನು ಕಂಡ ಮಗ ಗಾಂಗೇಯ, ಮಂತ್ರಿಯನ್ನು ಕರೆಸಿ ಕಾರಣ ಕೇಳುತ್ತಾನೆ. ಶಂತನು ಗಂಗಾತೀರದಲ್ಲಿ ಗಂಧವತಿಯನ್ನು ನೋಡಿ ಮನಸ್ಸಾಗುತ್ತದೆ. ಅವಳ ತಂದೆ ದಾಸರಾಜನ ಬಳಿ ಹೋಗಿ ಮಗಳನ್ನು ಕೇಳುತ್ತಾನೆ.
ತಂದೆ ಶಂತನು ಚಿಂತಾಕ್ರಾಂತನಾಗಿರುವುದನ್ನು ಕಂಡ ಮಗ ಗಾಂಗೇಯ, ಮಂತ್ರಿಯನ್ನು ಕರೆಸಿ ಕಾರಣ ಕೇಳುತ್ತಾನೆ. ಶಂತನು ಗಂಗಾತೀರದಲ್ಲಿ ಗಂಧವತಿಯನ್ನು ನೋಡಿ ಮನಸ್ಸಾಗುತ್ತದೆ. ಅವಳ ತಂದೆ ದಾಸರಾಜನ ಬಳಿ ಕೇಳುತ್ತಾನೆ. ತಂದೆಯ ನಿಬಂಧನೆಗಳನ್ನು ಕೇಳಿ ಶಂತನು ವಾಪಸ್ಸಾಗುತ್ತಾನೆ.
ಇದನ್ನು ಕೇಳಿ ಗಾಂಗೇಯ ಕೂಡಲೇ ದಾಸರಾಜನ ಬಳಿ ಹೋಗಿ ತಂದೆಗೆ ಕನ್ಯೆಯನ್ನು ಕೇಳುತ್ತಾನೆ. ಆಗ ದಾಸರಾಜ ಕೆಲವು ನಿಬಂಧನೆಗಳನ್ನು ಹಾಕುತ್ತಾನೆ. ಅದರಂತೆ ಗಾಂಗೇಯ (ಭೀಷ್ಮ), ತುಂಬಿದ ಸಭೆಯಲ್ಲಿ ಅಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿ, ತಂದೆ ಬಳಿ ಸತ್ಯವತಿಯನ್ನು ಕರೆದುಕೊಂಡು ಹೋಗಿ ನಡೆದ ವೃತ್ತಾಂತವನ್ನು ವಿವರಿಸುತ್ತಾನೆ. ಆಗ ತಂದೆ ಶಂತನು ಆನಂದ ಬಾಷ್ಪ ಸುರಿಸಿ, ನೀನು ಇಚ್ಛಾಮರಣಿಯಾಗು, ನೀನು ಬಯಸುವವರೆಗೂ ಸಾವು ನಿನ್ನ ಬಳಿ ಬರುವುದಿಲ್ಲ ಎಂದು ವರ ಕೊಡುತ್ತಾನೆ.