ಗರ್ವದಿಂದ ಶೋಭೆ ಕಳೆದುಕೊಂಡ ಇಂದ್ರನಿಗೆ ದೂರ್ವಾಸರು ಭೋದಿಸುವುದು ಹೀಗೆ
ಒಮ್ಮೆ ದೂರ್ವಾಸ ಮಹರ್ಷಿ ವಿಷ್ಣುವಿನ ಪ್ರಸಾದವಾದ ಹೂಮಾಲೆಯನ್ನು ಇಂದ್ರನಿಗೆ ಕೊಡಲು ತೆಗೆದುಕೊಂಡು ಹೋಗುತ್ತಾರೆ. ಇಂದ್ರನು ಹೂಮಾಲೆಯನ್ನು ತೆಗೆದುಕೊಂಡು, ಪಕ್ಕದಲ್ಲೇ ಇದ್ದ ರಂಭೆಯನ್ನು ನೋಡಿ ಗರ್ವಪಡುತ್ತಾ ಆ ಹೂಮಾಲೆಯನ್ನು ಗಿರಗಿರನೆ ತಿರುಗಿಸಿ ಆನೆ ಮೇಲೆ ಬಿಸಾಕಿಬಿಟ್ಟ.
ಒಮ್ಮೆ ದೂರ್ವಾಸ ಮಹರ್ಷಿ ವಿಷ್ಣುವಿನ ಪ್ರಸಾದವಾದ ಹೂಮಾಲೆಯನ್ನು ಇಂದ್ರನಿಗೆ ಕೊಡಲು ತೆಗೆದುಕೊಂಡು ಹೋಗುತ್ತಾರೆ. ಇಂದ್ರನು ಹೂಮಾಲೆಯನ್ನು ತೆಗೆದುಕೊಂಡು, ಪಕ್ಕದಲ್ಲೇ ಇದ್ದ ರಂಭೆಯನ್ನು ನೋಡಿ ಗರ್ವಪಡುತ್ತಾ ಆ ಹೂಮಾಲೆಯನ್ನು ಗಿರಗಿರನೆ ತಿರುಗಿಸಿ ಆನೆ ಮೇಲೆ ಬಿಸಾಕಿಬಿಟ್ಟ. ಇದನ್ನು ನೋಡಿ ದೂರ್ವಾಸರಿಗೆ ಕೋಪಬಂದು ನಿನಗೆ ಸ್ವರ್ಗ ಲಕ್ಷ್ಮೀ ದೂರವಾಗಲಿ ಎಂದು ಶಾಪ ಕೊಡುತ್ತಾರೆ. ಇಂದ್ರನು ಶೋಭೆಯನ್ನು ಕಳೆದುಕೊಳ್ಳುತ್ತಾನೆ. ಆಗ ದೂರ್ವಾಸರಿಗೆ ಮರುಕ ಉಂಟಾಯಿತು.
ಯಮಧರ್ಮರಾಯ, ಸಾವಿತ್ರಿ ದೇವಿಗೆ ದೇವಿ ಮಹಾತ್ಮೆಯನ್ನು ಭೋದಿಸಿದ್ದು ಹೀಗೆ