ಮಹಾಭಾರತ: ಬ್ರಾಹ್ಮಣನ ಶಾಪದಿಂದ ಸರ್ಪನಾಗಿದ್ದ ಸಹಸ್ರಪಾದನಿಗೆ ವಿಮೋಚನೆಯಾದ ಕಥೆ
ಮಹಾಭಾರತದಲ್ಲಿ ಸಹಸ್ರಪಾದ ಎಂಬ ಋಷಿ ಬ್ರಾಹ್ಮಣನ ಶಾಪದಿಂದ ದುಂಬಬ ಎಂಬ ಸರ್ಪನಾಗಿದ್ದ. ಸಹಸ್ರಪಾದನಿಗೆ ಖಗಮ ಎಂಬ ಸ್ನೇಹಿತನಿದ್ದ. ಒಮ್ಮೆ ಅವರ ಮನೆಗೆ ಹೋದಾಗ ಖಗಮ ಅಗ್ನಿಹೋತ್ರ ಮಾಡುತ್ತಿರುತ್ತಾರೆ.
ಮಹಾಭಾರತದಲ್ಲಿ ಸಹಸ್ರಪಾದ ಎಂಬ ಋಷಿ ಬ್ರಾಹ್ಮಣನ ಶಾಪದಿಂದ ದುಂಬಬ ಎಂಬ ಸರ್ಪನಾಗಿದ್ದ. ಸಹಸ್ರಪಾದನಿಗೆ ಖಗಮ ಎಂಬ ಸ್ನೇಹಿತನಿದ್ದ. ಒಮ್ಮೆ ಅವರ ಮನೆಗೆ ಹೋದಾಗ ಖಗಮ ಅಗ್ನಿಹೋತ್ರ ಮಾಡುತ್ತಿರುತ್ತಾರೆ.
ಮಹಾಭಾರತ: ಗುರುಪತ್ನಿಯ ಆಜ್ಞೆ ಪಾಲಿಸಿದ ಉತ್ತಂಗ, ಮನೆಗೆ ಹೋಗಲು ಗುರುಗಳಿಂದ ಸಿಕ್ತು ಅನುಮತಿ
ಆಗ ಸಹಸ್ರಪಾದ ಕೀಟಲೆ ಮಾಡಬೇಕೆಂದು ದರ್ಬೆಯ ಹಿಡಿಯನ್ನು ಹಾವಿನಾಕಾರವಾಗಿ ಮಾಡಿ ಖಗಮನ ಮೇಲೆ ಎಸೆಯುತ್ತಾನೆ. ಇದರಿಂದ ಕೋಪಗೊಂಡ ಖಗಮ, ನೀನು ಸರ್ಪನಾಗು ಎಂದು ಶಪಿಸುತ್ತಾನೆ. ಇದರಿಂದ ಗಾಬರಿಯಾದ ಸಹಸ್ರಪಾದ, ಅಯ್ಯಾ ಮಿತ್ರ, ಸ್ನೇಹಿತನೆಂಬ ಸಲುಗೆಯಿಂದ ಹೀಗೆ ಮಾಡಿದೆ. ಶಾಪ ವಿಮೋಚನೆಗೆ ಏನು ಮಾಡಬೇಕೆಂದು ಕೇಳುತ್ತಾನೆ. ಭ್ರಮತಿಗೆ ರುರು ಎಂಬ ಹೆಸರಿನ ಶುದ್ಧಚರಿತನಾದ ಮಗ ಹುಟ್ಟುತ್ತಾನೆ. ಅವನನ್ನು ನೋಡಿದಾಗ ನಿನ್ನ ಶಾಪ ವಿಮೋಚನೆಯಾಗುತ್ತದೆ ಎನ್ನುತ್ತಾರೆ.