ದೇವತಾ ಪೂಜೆಗಳಲ್ಲಿ ತುಳಸಿಗೆ ಯಾಕಿಷ್ಟು ಮಹತ್ವ..?

ತುಳಸಿ ದೇವಿಗೆ ಒಮ್ಮೆ ಶ್ರೀಹರಿಯ ಮೇಲೆ ಕೋಪಗೊಂಡು 'ನೀನು ಬಂಡೆಕಲ್ಲಾಗು' ಎಂದು ಶಪಿಸುತ್ತಾಳೆ. ಆಗ ಹರಿ ಹೀಗೆ ಹೇಳುತ್ತಾನೆ,

First Published Jun 27, 2021, 5:03 PM IST | Last Updated Jun 27, 2021, 5:03 PM IST

ತುಳಸಿ ದೇವಿಗೆ ಒಮ್ಮೆ ಶ್ರೀಹರಿಯ ಮೇಲೆ ಕೋಪಗೊಂಡು ನೀನು ಬಂಡೆಕಲ್ಲಾಗು ಎಂದು ಶಪಿಸುತ್ತಾಳೆ. ಆಗ ಹರಿ ಹೇಳುತ್ತಾನೆ, ತುಳಸಿ, ಹಿಂದಿನ ಜನ್ಮದಲ್ಲಿ ನೀನು ನನಗೋಸ್ಕರ ತಪಸ್ಸು ಮಾಡಿದ್ದೆ. ನನ್ನನ್ನೇ ಕೋರಿಕೊಂಡಿದ್ದೆ. ಈಗ ಈ ದೇಹವನ್ನು ತ್ಯಜಿಸಿ, ದಿವ್ಯದೇಹವನ್ನು ಧಾರಣೆ ಮಾಡು. ಲಕ್ಷ್ಮೀ ಜೊತೆ ಸುಖವಾಗಿರು. ನೀನು ತ್ಯಜಿಸಿದ ಶರೀರ ಗಂಡಕಿ ನದಿಯಾಗುತ್ತದೆ. ನಿನ್ನ ಜುಟ್ಟು ಪೂಜನೀಯವಾದ ತುಳಸಿ ವೃಕ್ಷವಾಗುತ್ತದೆ. ದೇವತಾ ಪೂಜೆಗಳಲ್ಲಿ ತುಳಸಿಗೆ ಪ್ರಾಧಾನ್ಯತೆ ಸಿಗುತ್ತದೆ. ತುಳಸಿ ಜಲದಲ್ಲಿ ಅಭಿಷೇಕ ಮಾಡಿದರೆ ಸರ್ವ ಯಜ್ಷದ ಫಲ ಸಿಗುತ್ತದೆ. ತುಳಸಿಯನ್ನು ಧರಿಸಿ, ಪ್ರಾಣ ಬಿಟ್ಟವರಿಗೆ ವಿಷ್ಣುಲೋಕ ಲಭಿಸುತ್ತದೆ' ಎಂದು ಶ್ರೀಹರಿ ಹೇಳುತ್ತಾನೆ.