ಶ್ರೀ ಮಾತೆಯ ಮಹಾತ್ಮೆ ಹೇಳುವವರಿಗೂ, ಕೇಳುವವರಿಗೆ ಸನ್ಮಂಗಲವಾಗುವುದು
ಸರ್ವ ಶಕ್ತಳು, ಆದಿಶಕ್ತಿಯೂ ಅಗಿರುವ ಶ್ರೀ ಮಾತೆಯ ಅನುಸಂಧಾನದಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಕಷ್ಟಗಳನ್ನು ಕರಗಿಸುತ್ತಾಳೆ ಆಕೆ. ಅಮ್ಮಾ ಎಂದು ಭಕ್ತಿಯಿಂದ ಕರೆದರೆ, ಕರೆದಲ್ಲಿಗೆ ಬರುವವಳು ಆ ತಾಯಿ.
ಸರ್ವ ಶಕ್ತಳು, ಆದಿಶಕ್ತಿಯೂ ಅಗಿರುವ ಶ್ರೀ ಮಾತೆಯ ಅನುಸಂಧಾನದಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಕಷ್ಟಗಳನ್ನು ಕರಗಿಸುತ್ತಾಳೆ ಆಕೆ. ಅಮ್ಮಾ ಎಂದು ಭಕ್ತಿಯಿಂದ ಕರೆದರೆ, ಕರೆದಲ್ಲಿಗೆ ಬರುವವಳು ಆ ತಾಯಿ. ಜಗತ್ಮಾತೆಗೆ ನಾನಾ ಹೆಸರು, ನಾನಾ ಅವತಾರಗಳಿವೆ. ಆಕೆಯ ಒಂದೊಂದು ಹೆಸರಿಗೂ ಒಂದೊಂದು ವಿಶಿಷ್ಟತೆ ಇದೆ. ಒಂದೊಂದು ಅವತಾರದ ಹಿಂದೆಯೂ ಒಂದೊಂದು ಕತೆಯಿದೆ. ಆಕೆಯ ಮಹಾತ್ಮೆಯನ್ನು ಹೇಳಿದವರಿಗೂ, ಕೇಳಿದವರಿಗೂ ಪುಣ್ಯ ಲಭಿಸುತ್ತದೆ.