ಇಂದು ಸ್ವರ್ಗದ ಬಾಗಿಲು ತೆಗೆಯುವ ದಿನ; ವಿಷ್ಣುವಿನ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿ
ಇಂದು ವೈಕುಂಠ ಏಕಾದಶಿ. ಮಹಾವಿಷ್ಣು ಯೋಗನಿದ್ರೆಯಿಂದ ಏಳುವ ಸುದಿನ. ದಕ್ಷಿಣಾಯನ ಕಾಲದಲ್ಲಿ ಯೋಗನಿದ್ರೆಗೆ ಜಾರಿ ಉತ್ತರಾಯಣ ಕಾಲದ ಪ್ರಾರಂಭದಲ್ಲಿ ಏಳುತ್ತಾರೆಂಬ ಪ್ರತೀತಿಯಿದೆ. ಹಾಗಾಗಿ ಇಂದು ಮಹಾವಿಷ್ಣುವಿನ ದರ್ಶನ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇದೆ.
ಇಂದು ವೈಕುಂಠ ಏಕಾದಶಿ. ಮಹಾವಿಷ್ಣು ಯೋಗನಿದ್ರೆಯಿಂದ ಏಳುವ ಸುದಿನ. ದಕ್ಷಿಣಾಯನ ಕಾಲದಲ್ಲಿ ಯೋಗನಿದ್ರೆಗೆ ಜಾರಿ ಉತ್ತರಾಯಣ ಕಾಲದ ಪ್ರಾರಂಭದಲ್ಲಿ ಏಳುತ್ತಾರೆಂಬ ಪ್ರತೀತಿಯಿದೆ. ಹಾಗಾಗಿ ಇಂದು ಮಹಾವಿಷ್ಣುವಿನ ದರ್ಶನ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇದೆ. ಇಂದು ವೈಕುಂಠ ಏಕಾದಶಿ ಮಾತ್ರವಲ್ಲ, ವಾಸುದೇವ ಕೇಷ್ಣ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ದಿನವೂ ಹೌದು.
ವೈಕುಂಠ ಏಕಾದಶಿಯಂದು ಮಹಾವಿಷ್ಣುವಿನ ದರ್ಶನ ಮಾಡಿದರೆ 100 ವಾಜಪೇಯ ಯಾಗ ಮಾಡಿದರೆ ಎಷ್ಟು ಪುಣ್ಯ ಬರುತ್ತದೋ ಅಷ್ಟೇ ಪುಣ್ಯ ಇಂದು ಬರುತ್ತದೆ. ಹಾಗಾದ್ರೆ ವೈಕುಂಠ ಏಕಾದಶಿ ಮಹತ್ವ, ಆಚರಣೆಯ ಬಗೆ ಬಗ್ಗೆ ತಿಳಿಯೋಣ ಬನ್ನಿ...!