ಸಂಕಷ್ಟಹರ ಗಣಪತಿ ಸ್ತೋತ್ರವನ್ನು ಯಾಕಾಗಿ ಪಠಿಸಬೇಕು? ಇದರ ಫಲವೇನು?

ಹಿಂದೆ ತ್ರಿಪುರಾಸುರನ ಕಾಟದಿಂದ ದೇವತೆಗಳು ಬೇಸತ್ತು ಹೋಗಿ ಗಣಪತಿಯ ಮೊರೆ ಹೋಗುತ್ತಾರೆ. ಗಣಪತಿ ಹೇಗಾದರೂ ತ್ರಿಪುರಾಸುರನಿಂದ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡುತ್ತಾರೆ. 

First Published Sep 21, 2020, 1:01 PM IST | Last Updated Sep 21, 2020, 1:20 PM IST

ಹಿಂದೆ ತ್ರಿಪುರಾಸುರನ ಕಾಟದಿಂದ ದೇವತೆಗಳು ಬೇಸತ್ತು ಹೋಗಿ ಗಣಪತಿಯ ಮೊರೆ ಹೋಗುತ್ತಾರೆ. ಗಣಪತಿ ಹೇಗಾದರೂ ತ್ರಿಪುರಾಸುರನಿಂದ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡುತ್ತಾರೆ.

ತ್ರಿಪುರಾಸುರನೆಂಬ ರಕ್ಕಸನ ವಧೆಗೆ ಮಹಾಗಣಪತಿ ಮೊರೆ ಹೋದ ದೇವತೆಯರು!

ಆಗ ಗಣಪತಿ ಪ್ರತ್ಯಕ್ಷನಾಗಿ, ಆಯ್ತು ನಿಮ್ಮ ಸಂಕಷ್ಟ ನಿವಾರಿಸುತ್ತೇನೆ. ನೀವು ನನ್ನನ್ನು ಪ್ರಾರ್ಥಿಸಿದ  ಸ್ತೋತ್ರ ಸಂಕಷ್ಟಹರ ಗಣಪತಿ ಸ್ತೋತ್ರ ಎಂದು ಪ್ರಸಿದ್ದಿಯಾಗುತ್ತದೆ. ಈ ಸ್ತೋತ್ರವನ್ನು ಯಾರು ತ್ರಿಕಾಲವೂ ಪಠಿಸುತ್ತಾರೋ ಅವರಿಗೆ ನನ್ನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಅವರಿಗೆ ಯಾವ ಸಂಕಷ್ಟವೂ ಬರುವುದಿಲ್ಲ. ಬಂದರೂ ಅದು ಕರಗಿ ಹೋಗುತ್ತದೆ ಎಂದು ಹೇಳಿ ಮಾಯವಾಗುತ್ತಾನೆ. ಮುಂದೆ ತ್ರಿಪುರಾಸುರನನ್ನು ವಧೆ ಮಾಡಲು ಬ್ರಾಹ್ಮಣನ ವೇಷ ಧರಸಿ ಹೋಗುತ್ತಾನೆ. ಹೀಗೆ ಕಥೆ ಸಾಗುತ್ತದೆ. ಸಂಕಷ್ಟಹರ ಗಣಪತಿ ಸ್ತೋತ್ರದ ಹಿಂದಿದೆ ಈ ಕಥೆ. ಇದರ ಬಗ್ಗೆ ಸವಿಸ್ತಾರವಾಗಿ ತಿಳಿಯೋಣ ಬನ್ನಿ..!

Video Top Stories