ಶುಕ್ರ ದೋಷದಿಂದ ಜೀವನದಲ್ಲಿ ನೆಮ್ಮದಿ ಹಾಳು; ಇಲ್ಲಿದೆ ಪರಿಹಾರ..!

ಶುಕ್ರ ಗ್ರಹದ ದೋಷವಿದ್ದರೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ಹಾಗಾಗಿ ಶುಕ್ರನ ಬಲ ಜಾತಕದಲ್ಲಿ ಬೇಕು. ಇದಕ್ಕೆ ಪರಿಹಾರಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
 

First Published Aug 4, 2023, 3:51 PM IST | Last Updated Aug 4, 2023, 3:51 PM IST

ಶುಕ್ರ ಗ್ರಹದ ದೋಷವಿದ್ದರೆ ಜೀವನದಲ್ಲಿ ತೊಂದರೆ ಹೆಚ್ಚಾಗುತ್ತವೆ. ಶುಕ್ರನಿದ್ದರೆ ದಾಂಪತ್ಯ ಚೆನ್ನಾಗಿರುತ್ತದೆ. ಶುಕ್ರನಿಲ್ಲ ಅಂದರೆ ದಾಂಪತ್ಯ ಚೆನ್ನಾಗಿರಲ್ಲ. ಶುಕ್ರ ಗ್ರಹ ದೋಷವಿದ್ದರೆ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.  ಶುಕ್ರನ ಮಂತ್ರಗಳನ್ನು 16,000 ಸಂಖ್ಯೆಯಲ್ಲಿ ಜಪಿಸಿ ಹೋಮ ಮಾಡುವುದು. ಚಿತ್ರವರ್ಣದ ಬಟ್ಟೆ, ಅಕ್ಕಿಯ ಪಾತ್ರೆ, ತುಪ್ಪದ ಪಾತ್ರೆ, ಬೆಳ್ಳಿ-ವಜ್ರಗಳ ದಾನ ಮಾಡಬೇಕು. ಹಾಗೆಯೇ ಅವರೆ ಧಾನ್ಯ ದಾನ ಮಾಡುವುದು ಬಿಳಿ ಚಂದನ ದಾನ ಮಾಡುವುದು ಬಿಳಿ ವಸ್ತ್ರ ದಾನ ಮಾಡುವುದು ಕೂಡ ಸೂಕ್ತ. ಮತ್ತು 
ಲಲಿತಾ ಸಹಸ್ರನಾಮ ಪಠಿಸುವುದು ಹಾಗೂ ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಪೂಜೆ ನೆರವೇರಿಸಬೇಕು ಎಂದು ಅವರು ತಿಳಿಸಿದ್ದಾರೆ.
 

Video Top Stories