ನಾರದರಿಗೆ ಸ್ಥಿರವಾದ ನೆಲೆಯಿಲ್ಲದೆ 3 ಲೋಕದಲ್ಲಿ ಸುತ್ತಾಡುವುದೇಕೆ? ಹಿಂದಿದೆ ಈ ಶಾಪದ ಕತೆ

ಕಾಲಪುರುಷನ ಮಗಳು ವಯಸ್ಸಿಗೆ ಬಂದಿರುತ್ತಾಳೆ. ಈಕೆಗೆ ಮದುವೆಯಾಗಲು ಗಂಡು ಸಿಗುವುದಿಲ್ಲ. ಒಂದು ದಿನ ಈಕೆ ನಾರದರ ಬಳಿ ಬರುತ್ತಾಳೆ. ಮೂರು ಲೋಕದಲ್ಲಿ ನನಗೆ ಮದುವೆಯಾಗಲು ಗಂಡು ಸಿಗಲಿಲ್ಲ. ನೀವೇ ಮದುವೆಯಾಗಿ ಎನ್ನುತ್ತಾಳೆ. 

First Published Dec 14, 2020, 12:30 PM IST | Last Updated Dec 14, 2020, 6:22 PM IST

ಪುರಂಜನ ಎನ್ನುವ ದಂಪತಿಗೆ ನೂರಾ ಒಂದು ಗಂಡು ಮಕ್ಕಳು, ನೂರೆಂಟು ಹೆಣ್ಣು ಮಕ್ಕಳು ಹುಟ್ಟುತ್ಥಾರೆ. ಅವರು ದೊಡ್ಡವರಾಗ್ಥಾರೆ. ಮದುವೆಯನ್ನು ಮಾಡ್ತಾರೆ. ಪುರಂಜನನಿಗೆ ವಯಸ್ಸಾಗುತ್ತಿದೆ. ಆಗ ಚಂಡವೇಗ ಎನ್ನುವ ಗಂಧರ್ವ ಈತನ ಪಟ್ಟನದ ಮೇಲೆ ದಾಳಿ ಮಾಡುತ್ತಾನೆ. ಇದು ಪುರಂಜನನಿಗೆ ಗೊತ್ತಾಗುವುದಿಲ್ಲ. ಆ ಸಂದರ್ಭದಲ್ಲಿ ಕಾಲಪುರುಷನ ಮಗಳು ಈ ಪಟ್ಟಣಕ್ಕೆ ಬರುತ್ತಾಳೆ.

ವಯಸ್ಸಿಗೆ ಬಂದಿರುವ ಈಕೆಗೆ ಮದುವೆಯಾಗಲು ಗಂಡು ಸಿಗುವುದಿಲ್ಲ. ಒಂದು ದಿನ ಈಕೆ ನಾರದರ ಬಳಿ ಬರುತ್ತಾಳೆ. ಮೂರು ಲೋಕದಲ್ಲಿ ನನಗೆ ಮದುವೆಯಾಗಲು ಗಂಡು ಸಿಗಲಿಲ್ಲ. ನೀವೇ ಮದುವೆಯಾಗಿ ಎನ್ನುತ್ತಾಳೆ. ನಾರದರು ಅದಕ್ಕೆ ಒಪ್ಪುವುದಿಲ್ಲ. ಅವಳಿಗೆ ತುಂಬಾ ಕೋಪ ಬಂದು ಬಿಡುತ್ತದೆ. ನಿಮಗೆ ಸ್ಥಿರವಾದ ನೆಲೆ ಇಲ್ಲದಂತಾಗಿ ಮೂರು ಲೋಕವನ್ನು ಸುತ್ತುವಂತಾಗಲಿ ಎಂದು ಶಾಪ ಕೊಡುತ್ತಾಳೆ. ನಾರದರು ಹಾಗೆ ಆಗಲಿ ಎಂದು ಒಪ್ಪಿಕೊಳ್ಳುತ್ತಾರೆ.