ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ ಪಣ ತೊಟ್ಟ ನರೇಂದ್ರ ಮೋದಿ!
ದೇಶದ ಉದ್ದಗಲಕ್ಕೂ ಪ್ರಧಾನಿ ನರೇಂದ್ರ ಮೋದಿ ಸಂಚಾರಿಸಿದ್ದು, ಮೋದಿ ಭೇಟಿ ಕೊಟ್ಟ ಮೇಲೆ ಅನೇಕ ತೀರ್ಥಕ್ಷೇತ್ರಗಳು ಅಭಿವೃದ್ಧಿಯಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಹಿಂದೂಗಳ ಪುಣ್ಯಕ್ಷೇತ್ರಗಳು ತಮ್ಮ ಕಳೆಯನ್ನ ಬದಲಿಸಿಕೊಂಡು ಆಕರ್ಷಕವಾಗಿವೆ. ಮೋದಿ ಅವಧಿಯಲ್ಲಿ ಅನೇಕ ದೇವಸ್ಥಾನಗಳು ಹಾಗೂ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಅಯೋಧ್ಯೆ, ಕಾಶಿ ವಿಶ್ವನಾಥ ಮಂದಿರ ಹಾಗೂ ಉಜ್ಜಯಿನಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ. ಆ ಪಟ್ಟಿಯಲ್ಲಿ ಈಗ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಕೂಡ ಸೇರ್ಪಡೆಯಾಗಿದೆ. ಈ ಮೂಲಕ ತಾನು ಅಪ್ರತಿಮ ದೈವಭಕ್ತ ಅನ್ನೋದನ್ನು ಮೋದಿ ತಮ್ಮ ನಡೆಯಿಂದಲೇ ತಿಳಿಸಿದ್ದಾರೆ.