Asianet Suvarna News Asianet Suvarna News

Lunar Eclipse 2022: ವರ್ಷದ ಮೊದಲ ರಕ್ತ ಚಂದ್ರ​​​​ ಗ್ರಹಣ ಗೋಚಾರ, ಎಲ್ಲರಿಗೂ ಕೆಡುತ್ತಾ ಗ್ರಹಚಾರ?

*ರಕ್ತ ಚಂದ್ರ​​​​ ಗ್ರಹಣ ಗೋಚಾರ.. ಎಲ್ಲರಿಗೂ ಕೆಡುತ್ತಾ ಗ್ರಹಚಾರ..?
*ಕುಂಭ ಶನಿಯ ವಕ್ರೀಚಾರ.. ವರ್ಷದ ಮೊದಲ ಕೇತುಗ್ರಸ್ತ ಚಂದ್ರ ಗ್ರಹಣ
*ಚಂಡಮಾರುತ, ಭೂಕಂಪ ಯುದ್ಧ ಭೀತಿ ದುಪ್ಪಟ್ಟಾಗುತ್ತಾ..?

ಬೆಂಗಳೂರು (ಮೇ. 14):  ವರ್ಷದ ಮೊದಲ ಚಂದ್ರ ಗ್ರಹಣ ಗೋಚಾರಕ್ಕೂ ಮುನ್ನ ಆಸಾನಿ ಚಂಡಿ ಆರ್ಭಟ ತಾರಕಕ್ಕೇರಿದೆ. ಒಂದ್​ ಕಡೆ ರಣ ರಣ ಬಿಸಿತು ತಾಂಡವವಾಡ್ತಿದ್ರೆ, ಇನ್ನೊಂದು ಕಡೆ ರಣರಕ್ಕಸ ಮಳೆಯಿಂದ ಜನರು ಹೈರಾಣಾಗಿದ್ದಾರೆ. ಹಾಗಾದ್ರೆ ವರ್ಷದ ಮೊಟ್ಟ ಮೊದಲ ರಕ್ತ ಚಂದ್ರ ಗ್ರಹಣ ಹೊತ್ತು ತಂದಿತಾ ಗಂಡಾಂತರ..? ವರ್ಷದ ಮೊದಲ ಚಂದ್ರಗ್ರಹಣ ಮೇ 16 ಸೋಮವಾರದಂದು ಸಂಭವಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆ, ಅದರಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳು ಇವೆ. ಈಗಾಗಲೇ ಕಳೆದ ತಿಂಗಳು ಏಪ್ರಿಲ್ 30 ರಂದು ಮೊದಲ ಸೂರ್ಯಗ್ರಹಣ ಸಂಭವಿಸಿದೆ.  

ಈ ಚಂದ್ರಗ್ರಹಣವು ಮೇ 15ರಂದು ರಾತ್ರಿ 10.28 ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಈ ರೀತಿಯ ಚಂದ್ರಗ್ರಹಣದಲ್ಲಿ ಸೂತಕದ ಆಚರಣೆ ಮಾಡಲಾಗುವುದಿಲ್ಲ.

ಇದನ್ನೂ ಓದಿ: Lunar Eclipse 2022: ಈ ಚಂದ್ರಗ್ರಹಣವು 3 ರಾಶಿಯವರ ಅದೃಷ್ಟ ಬದಲಿಸುತ್ತೆ..!

ಮೇ ತಿಂಗಳು ಅಂದ್ರೆ ಸಾಮಾನ್ಯವಾಗಿ ರಣ ರಣ ಬಿಸಿಲು ತಾಂಡವವಾಡುತ್ತದೆ. ಆದ್ರೆ ಈ ವರ್ಷ ಮಾತ್ರ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಉತ್ತರದಲ್ಲಿ ರಣಭೀಕರ ಬಿಸಿಲಿನ ಅಲರ್ಟ್​ ಘೋಷಿಸಲಾಗಿದ್ದು, ದಕ್ಷಿಣದಲ್ಲಿ ಚಂಡಾಸುರ ಘರ್ಜಿಸುತ್ತಿದ್ದಾನೆ. ಆಸಾನಿ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಹುಟ್ಟಿಕೊಂಡು ಪಂಚರಾಜ್ಯಗಳಲ್ಲಿ ರಣಭಯಂಕರ ಬಿರುಗಾಳಿ ಎಬ್ಬಿಸಿ, ಮಳೆ ಸುರಿಸಿ ಅಟ್ಟಹಾಸದಿಂದ ಮೆರೆಯುತ್ತಿದೆ.. 

ಈ ಸೈಕ್ಲೋನ್​​ ಪರಿಣಾಮ, ರಾಜ್ಯದಲ್ಲಿ ಸಿಡಿಲಾರ್ಭಟದಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲವೂ ವರ್ಷದ ಮೊಟ್ಟ ಮೊದಲ ರಕ್ತ ಚಂದ್ರ ಗ್ರಹಣಕ್ಕಿಂದ ಪೂರ್ವದಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಿಸುತ್ತಿದೆ. ಈ ರಕ್ತ ಚಂದ್ರ ಗ್ರಹಣ  ಎಲ್ಲೆಲ್ಲಿ ಗೋಚಾರವಾಗುತ್ತೋ ಅಲ್ಲಲ್ಲಿ ದೋಷ, ಕಂಟಕ ಇದೆ ಅಂತ ಜ್ಯೋತಿಷ್ಯಾಸ್ತ್ರ ಹೇಳ್ತಿದೆ.  ಇಲ್ಲಿದೆ ಈ ಕುರಿತ ಕಂಪ್ಲೀಟ್​ ರಿಪೊರ್ಟ್​​​