Asianet Suvarna News Asianet Suvarna News

ಭಗವಂತನ ಮೊದಲ ಅವತಾರ ಮತ್ಸ್ಯಾವತಾರ, ಯಾಕಾಗಿ ತಾಳಿದ..?

ಭಗವಂತ ಜಗತ್ ಕಲ್ಯಾಣಕ್ಕಾಗಿ ನಾನಾ ಅವತಾರ ತಾಳುತ್ತಾನೆ. ಮೊದಲ ಅವತಾರ ಮತ್ಸ್ವಾವತಾರ ಎನ್ನಲಾಗುತ್ತದೆ. ಒಮ್ಮೆ ರಾಜ ಸತ್ಯವ್ರತನಿಗೆ ಅಪಾಯಕ್ಕೆ ಸಿಲುಕಿರುವ ಮೀನೋಂದು ನನ್ನನ್ನು ಬದುಕಿಸು ಎಂದು ಯಾಚಿಸುತ್ತದೆ.

First Published Jan 9, 2021, 1:23 PM IST | Last Updated Jan 9, 2021, 1:23 PM IST

ಭಗವಂತ ಜಗತ್ ಕಲ್ಯಾಣಕ್ಕಾಗಿ ನಾನಾ ಅವತಾರ ತಾಳುತ್ತಾನೆ. ಮೊದಲ ಅವತಾರ ಮತ್ಸ್ವಾವತಾರ ಎನ್ನಲಾಗುತ್ತದೆ. ಒಮ್ಮೆ ರಾಜ ಸತ್ಯವ್ರತನಿಗೆ ಅಪಾಯಕ್ಕೆ ಸಿಲುಕಿರುವ ಮೀನೋಂದು ನನ್ನನ್ನು ಬದುಕಿಸು ಎಂದು ಯಾಚಿಸುತ್ತದೆ. ಆಗ ರಾಜ ಸತ್ಯವ್ರತನಿಗೆ ಮೀನು ಮಾತನಾಡುವುದನ್ನು ನೋಡಿ ಅಚ್ಚರಿಯಾಗುತ್ತದೆ. ಆಗ ನೀನು ಯಾರು ಎಂದು ಪ್ರಶ್ನಿಸಿದಾಗ, ನಾನು ಪರಮಾತ್ಮ. ಇನ್ನು ಕೆಲವೇ ದಿನಗಳಲ್ಲಿ ಪ್ರಳಯವಾಗುತ್ತದೆ. ಆಗ ನನ್ನ ತಲೆ ಮೇಲೆ ಒಂದು ಕೊಂಬಿರುತ್ತದೆ. ಆ ಕೊಂಬಿಗೆ ದೋಣಿ ಕಟ್ಟಿ, ನೀನು ಹತ್ತು. ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತದೆ. ಅದೇ ರೀತಿ ಪ್ರಳಯವಾಗುತ್ತದೆ. ಮುಂದೆ ಮೀನು ಸತ್ಯವ್ರತನಿಗೆ ತತ್ವೋಪದೇಶ ಮಾಡುತ್ತದೆ. ಅದೇ ಮತ್ಸ್ಯ ಪುರಾಣ.

ಬಲಿ ಚಕ್ರವರ್ತಿಯನ್ನು ಸಂಹರಿಸಲು ಭಗವಂತ ಮಾಡಿದ ಉಪಾಯವಿದು..!

Video Top Stories