Mangaluru: 'ಕಾಂತಾರ' ಗುಂಗಿನ ಮಧ್ಯೆಯೇ ಮತ್ತೆ ಸಾಬೀತಾಯ್ತು ಕಾರ್ಣಿಕ ದೈವದ ಪವಾಡ
ಗುಳಿಗ ದೈವದ ಮೊರೆ: ಗಲಭೆಗೆ ಯತ್ನಿಸಿದ ಕಿಡಿಗೇಡಿಗಳು ಅಂದರ್!
ದೈವದ ಎದುರಿನ ಪ್ರಾರ್ಥನೆಯ ಫಲ!
ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಬಂಧನ
ವಾಮಂಜೂರಿನ ಶಾರದೋತ್ಸವ ಬ್ಯಾನರ್ ಹರಿದ ಘಟನೆ
ತುಳುನಾಡಿನ ದೈವಗಳ ಕಾರ್ಣಿಕ ಶಕ್ತಿಯ ಅನಾವರಣದ ಕಥೆಗಳು ಒಂದೆರಡಲ್ಲ. ಪೊಲೀಸ್ ಠಾಣೆ, ಕೋರ್ಟ್ ಗಳಲ್ಲಿ ಇತ್ಯರ್ಥವಾಗದ ಬಹುತೇಕ ಪ್ರಕರಣಗಳು ದೈವಗಳ ಮುಂದೆ ಕೈಯೊಡ್ಡಿ ಬೇಡಿಕೊಂಡ ಬೆನ್ನಲ್ಲೇ ಬಗೆ ಹರಿದ ಸಾವಿರಾರು ಉದಾಹರಣೆಗಳು ಈ ಭಾಗದಲ್ಲಿ ಜನಜನಿತ. ಹಾಗೆ ನೋಡಿದರೆ ವಾಮಂಜೂರಿನ ಈ ಘಟನೆ ಅದಕ್ಕೊಂದು ಸಣ್ಣ ಉದಾಹರಣೆ ಅಷ್ಟೇ. ಕೋಮು ಸೂಕ್ಷ್ಮ ಮಂಗಳೂರಿನಲ್ಲಿ ಬ್ಯಾನರ್ ಹರಿಯುವ, ಗಲಭೆ ಹುಟ್ಟು ಹಾಕಲೆಂದೇ ಕಿಡಿಗೇಡಿ ಕೃತ್ಯ ಎಸಗುವ ಕ್ರಿಮಿಗಳ ಉಪಟಳಕ್ಕೆ ತಡೆ ಬಿದ್ದಿಲ್ಲ. ಆದರೆ ಇಂಥ ಘಟನೆಗಳಾದ ತಕ್ಷಣ ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ಇಡೀ ಜಿಲ್ಲೆಯಲ್ಲಿ ಸಂಘರ್ಷದ ಕಿಡಿ ಹತ್ತಿ ಕೊಳ್ಳಬಹುದು.
ಮಹಾಕಾಲ ಕಾರಿಡಾರ್ ಉದ್ಘಾಟನೆಯಲ್ಲೂ ವಿಶೇಷತೆ ಮೆರೆದ ಮೋದಿ
ಅದೇ ರೀತಿ ವಾಮಂಜೂರಿನ ಶಾರದೋತ್ಸವ ಬ್ಯಾನರ್ ಹರಿದ ಘಟನೆಯೂ ಜಿಲ್ಲೆಯ ಮಟ್ಟಿಗೆ ಅತೀ ಸೂಕ್ಷ್ಮ ವಿಚಾರ. ಯಾರೋ ಕೃತ್ಯ ಎಸಗಿ ಯಾರದ್ದೋ ತಲೆಗೆ ಕಟ್ಟಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಇದರಲ್ಲಿತ್ತು ಎನ್ನಲಾಗಿದೆ. ಆದರೆ ಈ ವಿಚಾರದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬೇಕಿದ್ದ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮಾತ್ರ ರಾಜಕೀಯ ಒತ್ತಡಕ್ಕೆ ಬಿದ್ದು ಆರೋಪಿಗಳನ್ನ ಮುಟ್ಟುವ ಕೆಲಸಕ್ಕೆ ಕೈ ಹಾಕಿಲ್ಲ ಎನ್ನುವುದು ಸ್ಥಳೀಯರ ಆರೋಪ. ಹೀಗಾಗಿ ದೂರು ಕೊಟ್ಟು ದಿನ ಕಳೆದರೂ, ಸಿಸಿಟಿವಿ ಸಾಕ್ಷ್ಯವಿದ್ದರೂ ಪೊಲೀಸರು ಮಾತ್ರ ಸೈಲೆಂಟ್ ಆಗಿದ್ದರು. ಹೀಗಾಗಿ ಕೊನೆಗೆ ವಾಮಂಜೂರು ಯುವಕರ ತಂಡ ಶ್ರೀಮಂತ ರಾಜ ಗುಳಿಗನ ಮೊರೆ ಹೋಗಿದೆ. ಆರೋಪಿಗಳಿಗೆ ಶಿಕ್ಷೆಯಾಗಲಿ ಅಂತ ದೈವದ ನಡೆಯಲ್ಲಿ ನಿಂತು ಪ್ರಾರ್ಥಿಸಿದೆ. ಕೊನೆಗೂ ಆ ಪ್ರಾರ್ಥನೆ ಫಲ ಕೊಟ್ಟಿದ್ದು, ಪೊಲೀಸರು ಆರೋಪಿಗಳಾದ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿಯನ್ನು ಬಂಧಿಸಿದ್ದಾರೆ. 'ಕಾಂತಾರ' ಸಿನಿಮಾ ಸದ್ದು ಮಾಡ್ತಿರೋ ಹೊತ್ತಲ್ಲೇ ತುಳುನಾಡು ಮತ್ತೊಮ್ಮೆ ದೈವದ ಕಾರ್ಣಿಕಕ್ಕೆ ಸಾಕ್ಷಿಯಾಗಿದೆ.