Asianet Suvarna News Asianet Suvarna News

Dubai Hindu Temple: ದುಬೈ ಭಾರತೀಯರಿಗೆ ಸಂತಸ, ಸುಂದರವಾಗಿ ಕಂಗೊಳಿಸುತ್ತಿದೆ ಹಿಂದೂ ದೇವಾಲಯ

ದುಬೈನಲ್ಲಿ ತಲೆ ಎತ್ತಿದೆ ಭವ್ಯ ಹಿಂದೂ ದೇವಾಲಯ. 16 ದೇವರ ಸುಂದರ ದೇವಸ್ಥಾನ. ಭಾರತೀಯರಿಗೆ ಇದು ಸಂತಸದ ಕ್ಷಣ

ದುಬೈನಲ್ಲಿರುವ ಭಾರತೀಯರಿಗೆ ಈ ವರ್ಷದ ದಸರಾ ತುಂಬಾ ವಿಶೇಷವಾದ ದಸರಾ.  ಈ ದಸರಾವನ್ನು ದುಬೈ ಭಾರತೀಯರು ಎಂದು ಮರೆಯೋದಿಲ್ಲ. ಆಯುಧ ಪೂಜೆಯಂದು ದುಬೈನಲ್ಲಿ ಭವ್ಯವಾದ ಹಿಂದೂ ದೇವಸ್ಥಾನ ಉದ್ಘಾಟನೆಗೊಂಡಿದೆ. ವಿಜಯದಶಮಿಯಂದು   ದರ್ಶನಕ್ಕಾಗಿ ಭಕ್ತರಿಗೆ ಅವಕಾಶ ಮಾಡಿ ಕೊಡಲಾ ಗಿದೆ.  ದುಬೈ ಸಚಿವ​ ಶೇಖ್​​​ ನಹ್ಯಾನ್​​ ಮುಬಾರಕ್​ ರಿಂದ ಇದು ಉದ್ಘಾಟನೆಗೊಂಡಿದೆ. ಶಿವ-ಪಾರ್ವತಿ ಸೇರಿ ಒಟ್ಟು 16 ಹಿಂದೂ ದೇವರ ಮೂರ್ತಿ. 32 ಲಕ್ಷ ದುಬೈ ಭಾರತೀಯರಿಗೆ ಸಂತಸದ ಕ್ಷಣ. ದುಬೈನಲ್ಲಿರುವ ಹಿಂದೂಗಳು ಅಲ್ಲೇ ಮದುವೆಯಾಗಬಹುದು. ವಿಶಾಲ ಪ್ರಾರ್ಥನಾ ಮಂದಿರ. ಸಮುದಾಯ ಭವನ ಇಲ್ಲಿದೆ.