'ಕಾವೇರಿ'ಯಲ್ಲಿ ದೀಪಾವಳಿ ಸಂಭ್ರಮ: ಗೋಪೂಜೆ ಮಾಡಿದ ಬಿ.ಎಸ್.ವೈ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಗೋಪೂಜೆ ಮಾಡಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆ ಬಿ.ಎಸ್.ವೈ ಅಧಿಕೃತ ನಿವಾಸ ಕಾವೇರಿಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಸ್ವತಃ ಯಡಿಯೂರಪ್ಪ ಇಳಿ ವಯಸ್ಸಿನಲ್ಲಿ ಸಹ ಉತ್ಸಾಹದಿಂದ ಗೋ ಪೂಜೆಯನ್ನು ನೆರವೇರಿಸಿದ್ದಾರೆ. ತಮ್ಮ ನೆಚ್ಚಿನ ಹಸು ಹಾಗೂ ಕರುಗಳಿಗೆ ಬಿ.ಎಸ್.ವೈ ಪೂಜೆ ಸಲ್ಲಿಸಿ ಧಾನ್ಯಗಳನ್ನು ತಿನ್ನಿಸಿ ಹಬ್ಬ ಆಚರಣೆ ಮಾಡಿದ್ದಾರೆ.