ದೇವಿ ಭಾಗವತದಲ್ಲಿ ಬರುವ ಶಂತನು ಮಹಾರಾಜ- ಸತ್ಯವತಿಯ ಅನುರಾಗದ ಕಥೆಯಿದು
ಸೂತ ಮಹರ್ಷಿಯು ಶವನಕಾದಿ ಮಹಾಮುನಿಗಳ ಕೋರಿಕೆ ಮೇರೆಗೆ ಗಂಗಾ- ಶಂತನರ ಕಥೆಯನ್ನು ಹೇಳಿದ. ಗಂಗಾ-ಶಂತನರಿಗೆ ದೇವವ್ರತ ಎಂಬ ಮಗ ಹುಟ್ಟುತ್ತಾನೆ. ಈತ 4 ವೇದಗಳನ್ನು ಅಭ್ಯಾಸ ಮಾಡಿದವ. ಧನುರ್ವಿದ್ಯೆಯನ್ನು ಕಲಿಯುತ್ತಾನೆ.
ಸೂತ ಮಹರ್ಷಿಯು ಶವನಕಾದಿ ಮಹಾಮುನಿಗಳ ಕೋರಿಕೆ ಮೇರೆಗೆ ಗಂಗಾ- ಶಂತನರ ಕಥೆಯನ್ನು ಹೇಳಿದ. ಗಂಗಾ-ಶಂತನರಿಗೆ ದೇವವ್ರತ ಎಂಬ ಮಗ ಹುಟ್ಟುತ್ತಾನೆ. ಈತ 4 ವೇದಗಳನ್ನು ಅಭ್ಯಾಸ ಮಾಡಿದವ. ಧನುರ್ವಿದ್ಯೆಯನ್ನು ಕಲಿಯುತ್ತಾನೆ. ಅವನನ್ನು ಗಂಗಾದೇವಿ ಶಂತನುವಿಗೆ ಒಪ್ಪಿಸಿದಾಗ, ಶಂತನು ಆತನನ್ನು ತನ್ನ ರಾಜ್ಯಕ್ಕೆ ಕರೆದುಕೊಂಡು ಹೋಗಿ ಯುವರಾಜನನ್ನಾಗಿ ಮಾಡುತ್ತಾನೆ. ಒಂದು ದಿನ ಶಂತ ಕಾಳಿಂದಿ ನದಿ ಬಳಿ ಹೋಗುವಾಗ, ಅಲ್ಲಿ ಯೋಜನಗಂಧಿನಿ ಎನ್ನುವ ಸತ್ಯವತಿ ನೋಡಿ ಮೋಹ ಉಂಟಾಗುತ್ತದೆ. ಅವಳ ಬಳಿ ಮದುವೆ ಪ್ರಸ್ತಾಪ ಮಾಡುತ್ತಾನೆ. ನನ್ನ ತಂದೆ ಒಪ್ಪಿಗೆ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇನೆ ಎನ್ನುತ್ತಾಳೆ. ಮುಂದೇನಾಗುತ್ತದೆ..?