Asianet Suvarna News Asianet Suvarna News

ಯೋಗರಾಜ್ ಭಟ್ ಗರಡಿಯಲ್ಲಿ ಅರಳಿದೆ ಪದವಿ ಪೂರ್ವ ಸ್ಟೋರಿ! ಡಿಸೆಂಬರ್ 30ಕ್ಕೆ ತೆರೆ ಮೇಲೆ

ಸ್ಯಾಂಡಲ್‌ವುಡ್‌ ಲವ್ ಸಿನಿಮಾಗಳ ಸರದಾರ ನಿರ್ದೆಶಕ ಯೋಗರಾಜ್ ಭಟ್ ಹೊಸ ಪ್ರಯತ್ನ ಪದವಿ ಪೂರ್ವ. ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ ಸೇರಿ ಜಂಟಿಯಾಗಿ ನಿರ್ಮಿಸಿದ ಸಿನಿಮಾ ಪದವಿ ಪೂರ್ವ. ಈ ಸಿನಿಮಾದ ಟೀಸರ್ ಇದೀಗ ರಿಲೀಸ್ ಆಗಿದೆ. 

ಸ್ಯಾಂಡಲ್‌ವುಡ್‌ ಲವ್ ಸಿನಿಮಾಗಳ ಸರದಾರ ನಿರ್ದೆಶಕ ಯೋಗರಾಜ್ ಭಟ್ ಹೊಸ ಪ್ರಯತ್ನ ಪದವಿ ಪೂರ್ವ. ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ ಸೇರಿ ಜಂಟಿಯಾಗಿ ನಿರ್ಮಿಸಿದ ಸಿನಿಮಾ ಪದವಿ ಪೂರ್ವ. ಈ ಸಿನಿಮಾದ ಟೀಸರ್ ಇದೀಗ ರಿಲೀಸ್ ಆಗಿದೆ. ನವರಸನಾಯಕ ಜಗ್ಗೇಶ್ ಪದವಿ ಪೂರ್ವ ಟೀಸರ್ ರಿಲೀಸ್ ಮಾಡಿದ್ದಾರೆ. ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿರುವ 'ಪದವಿಪೂರ್ವ' ಸಿನಿಮಾದ ಫ್ರೆಂಡ್ಶಿಪ್ ಸಾಂಗ್ ಈಗಾಗಲೇ ಭರ್ಜರಿ ಸದ್ದು ಮಾಡಿತ್ತು. ಈಗ ಟೀಸರ್ ಈ ಸಿನಿಮಾದ ಮೈಲೇಜ್ ಹೇಗಿರುತ್ತೆ ಅಂತ ತೋರಿಸಿದೆ. ಹೊಸಬರ ದಂಡೇ ಇರುವ ಪದವಿ ಪೂರ್ವ ಸಿನಿಮಾದಲ್ಲಿ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾಗಿದ್ದು, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶರತ್ ಲೋಹಿತಾಶ್ವ, ರಂಗಾಯಣ ರಘು, ರಾಮಾರಾಮಾರೆ ಖ್ಯಾತಿಯ ನಟರಾಜ್ ಭಟ್ ನಟಿಸಿದ್ದು ಯೋಗರಾಜ್ ಭಟ್, ನಟಿ ಅದಿತಿ ಪ್ರಭುದೇವ, ದಿವ್ಯ ಉರುಡುಗ, ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಡಿಸೆಂಬರ್ 30 ರಂದು ಪದವಿ ಪೂರ್ವ ಬಿಡುಗಡೆ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment