ಶ್ರೇಯಸ್ ಹೊಸ ಸಿನಿಮಾ ದಿಲ್ದಾರ್: ಕೆ.ಮಂಜು ಪುತ್ರನಿಗೆ ಕ್ರೇಜಿಸ್ಟಾರ್ ಸಪೋರ್ಟ್!

ದಿಲ್ ದಾರ್ ಅಂದ್ರೇನೆ ರವಿಚಂದ್ರನ್. ಯಾಕಂದ್ರೆ ಕ್ರೇಜಿಸ್ಟಾರ್ ಯಾವ್ದಕ್ಕೂ ತಲೆ ಕೆಡಿಸಿಕೊಳ್ಳೋಲ್ಲಾ. ರಿಯಲ್ಲಾಗಿರಲಿ. ತೆರೆ ಮೇಲಾದ್ರು ಆಗಿರಲಿ. ಯಾವಾಗ್ಲು ದಿಲ್ದಾರ್ ಆಗೇ ಇರೋ ಸ್ಟಾರ್ ಕ್ರೇಜಿಸ್ಟಾರ್ ರವಿಚಂದ್ರನ್. 

First Published Apr 2, 2023, 9:22 PM IST | Last Updated Apr 2, 2023, 9:22 PM IST

ದಿಲ್ ದಾರ್ ಅಂದ್ರೇನೆ ರವಿಚಂದ್ರನ್. ಯಾಕಂದ್ರೆ ಕ್ರೇಜಿಸ್ಟಾರ್ ಯಾವ್ದಕ್ಕೂ ತಲೆ ಕೆಡಿಸಿಕೊಳ್ಳೋಲ್ಲಾ. ರಿಯಲ್ಲಾಗಿರಲಿ. ತೆರೆ ಮೇಲಾದ್ರು ಆಗಿರಲಿ. ಯಾವಾಗ್ಲು ದಿಲ್ದಾರ್ ಆಗೇ ಇರೋ ಸ್ಟಾರ್ ಕ್ರೇಜಿಸ್ಟಾರ್ ರವಿಚಂದ್ರನ್. ಇದೀಗ ಸ್ಯಾಂಡಲ್ವುಡ್‌ನ ಗಂಡುಗಲಿ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಕೆ ಮಂಜುಗು ನೀನು ಯಾವಾಗ್ಲು ದಿಲ್ದಾರ್ ಆಗಿರೂ ಮಗಾ ಎಂದಿದ್ದಾರೆ ಕ್ರೇಜಿಸ್ಟಾರ್.. ಹೌದು, ಶ್ರೇಯಸ್ ಕೆ ಮಂಜು ಹೊಸ ಸಿನಿಮಾ ದಿಲ್ದಾರ್. ಈ ಸಿನಿಮಾದ ಟೈಟಲ್ ಅನೌನ್ಸ್ ಹಾಗು ಮಹೂರ್ತ ಕಾರ್ಯಕ್ರಮ ಬೆಂಗಳೂರಿನ  ಶ್ರೀಕಂಠೇಶ್ವರ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ. 

ಕ್ರೇಜಿಸ್ಟಾರ್ ರವಿಚಂದ್ರನ್ ರಿಂದ ದಿಲ್ದಾರ್ ಟೈಟಲ್ ರಿವೀಲ್ ಆಗಿದ್ದು, ಸಿನಿಮಾದ ಮೊದಲ ದೃಶ್ಯಕ್ಕೆ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ರು. ಈ ಸಿನಿಮಾ ಬಗ್ಗೆ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಸಿನಿಮಾ ಮಾಡಬೇಕು ಅಂದರೆ ದಿಲ್ ಬೇಕು ಅಂದ್ರು. ದಿಲ್ ದಾರ್ ಸಿನಿಮಾವನ್ನ ನಿರ್ದೇಶಕ ಮಧು ಗೌಡ ಆಕ್ಷನ್ ಕಟ್ ಹೇಳುತ್ತಿದ್ದು, ಸಂತೋಷ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅದ್ಧೂರಿ ಲವರ್ಸ್ ಹಾಗೂ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸಿರೋ ಪ್ರಿಯಾಂಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. 

Video Top Stories