ರಿಯಲ್ ಸ್ಟಾರ್ ಉಪ್ಪಿಯ 'ಕಬ್ಜ'ಕ್ಕೆ ಕೌಂಟ್‌ಡೌನ್: ಏಳು ಭಾಷೆ, 4.500 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆ

ಕನ್ನಡದ ಮತ್ತೊಂದು ಹೆಮ್ಮೆ, ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. 48 ಗಂಟೆ ಕಳೆದ್ರೆ ಕಬ್ಜ ಬೆಳ್ಳಿತೆರೆ ಆವರಿಸಿಕೊಳ್ಳಲಿದೆ. ಕಬ್ಜ ಕರ್ತು ಆರ್ ಚಂದ್ರು ಟೀಂ ಹೈದರಾಬಾದ್, ಚನ್ನೈ, ಮುಂಬೈ ಸುತ್ತಿ ಬಂದ ಬಳಿಕ ಈಗ ಬೆಂಗಳೂರಿನಲ್ಲಿ ಕಬ್ಜ ಪ್ರೀ ರಿಲೀಸ್ ಇವೇಂಟ್ ಮಾಡಿದ್ದಾರೆ. 

First Published Mar 16, 2023, 9:22 PM IST | Last Updated Mar 16, 2023, 9:22 PM IST

ಕನ್ನಡದ ಮತ್ತೊಂದು ಹೆಮ್ಮೆ, ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. 48 ಗಂಟೆ ಕಳೆದ್ರೆ ಕಬ್ಜ ಬೆಳ್ಳಿತೆರೆ ಆವರಿಸಿಕೊಳ್ಳಲಿದೆ. ಕಬ್ಜ ಕರ್ತು ಆರ್ ಚಂದ್ರು ಟೀಂ ಹೈದರಾಬಾದ್, ಚನ್ನೈ, ಮುಂಬೈ ಸುತ್ತಿ ಬಂದ ಬಳಿಕ ಈಗ ಬೆಂಗಳೂರಿನಲ್ಲಿ ಕಬ್ಜ ಪ್ರೀ ರಿಲೀಸ್ ಇವೇಂಟ್ ಮಾಡಿದ್ದಾರೆ. ಕಬ್ಜದ ಈ ಪ್ರೀ ರಿಲೀಸ್ ಕಾರ್ಯಕ್ರಮ ಹಲವು ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಪ್ರೀ ರಿಲೀಸ್  ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ತಾರೆಯರ ಸಮಾಗಮ ಆಗಿತ್ತು. ಕಿಚ್ಚ ಸುದೀಪ್ ತನ್ನ ಮಗಳು ಸಾನ್ವಿ ಜೊತೆ ಬಂದಿದ್ರು. ಉಪೇಂದ್ರ, ನಟಿ ಶ್ರೀಯಾ ಶರಣ್, ತಾನ್ಯಾ ಹೋಪ್ ಇದ್ರು. ಇವರ ಜೊತೆಗೆ ಡಾಲಿ ಧನಂಜಯ್, ಹಾಗು ಲವ್ಲಿ ಸ್ಟಾರ್ ಪ್ರೇಮ್ ಗೆಸ್ಟ್ ಆಗಿ ಬಂದಿದ್ರು. 

ಶ್ರೇಯಾ ಶರಣ್ ಡಾನ್ಸ್ ಮಾಡಿಕೊಂಡು ಕನ್ನಡದಲ್ಲಿ ಮತಾನಾಡುತ್ತಾ ಎಲ್ಲರೂ ಸಿನಿಮಾ ನೋಡೋಕೆ ಬನ್ನಿ ಅಂತ ಪ್ರೇಕ್ಷಕರನ್ನ ಕರೆದ್ರು. ಶ್ರೀಯಾ ಶರಣ್ ಡಾನ್ಸ್ಗೆ ಅಲ್ಲಿದ್ದವರೆಲ್ಲಾ ಬಿದ್ದು ನಕ್ಕಿದ್ರು. ಕಬ್ಜ ಸಿನಿಮಾದಲ್ಲಿ ಚುಮ್ ಚುಮ್ ಚಳಿ ಅನ್ನೋ ಸ್ಪೆಷಲ್ ನಂಬರ್ ಇದೆ. ಈ ಹಾಡಿನಲ್ಲಿ ಹಾಟ್ ಆಗಿ ಸೊಂಟ ಬಳುಕಿಸಿರೋದು ಹಾಟೆಸ್ಟ್ ಹೀರೋಯಿನ್ ತಾನ್ಯಾ ಹೋಪ್. ಈ ಹಾಡಿನಲ್ಲಿ ಉಪ್ಪಿ ಜೊತೆ ಡಾನ್ಸ್ ಮಾಡಿದ ಎಕ್ಸ್ಪೀರಿಯನ್ಸ್ಅನ್ನ ತಾನ್ಯಾ ಹೋಪ್ ಹಂಚಿಕೊಂಡ್ರು. ಕಬ್ಜದಲ್ಲಿ ಕಿಚ್ಚನದ್ದು ಭಾರ್ಗವ್ ಭಕ್ಷಿ ರೋಲ್. ಈ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡ ಲುಕ್ ಕಬ್ಜ ಮೇಲೆ ಮತ್ತೊಂದು ನಿರೀಕ್ಷೆಗೆ ಕಾರಣ ಆಗಿದೆ. ಈ ಸಿನಿಮಾದಲ್ಲಿ ಸುದೀಪ್ ನಟಿಸೋಕೆ ಕಾರಣ ಓನ್ಲಿ ಸ್ನೇಹ ಮಾತ್ರ ಅಂತೆ. ಆರ್ ಚಂದ್ರು, ಉಪೇಂದ್ರ, ಶಿವಣ್ಣನ ಜೊತೆಗಿನ ಸ್ನೇಹಕ್ಕಾಗಿ ಈ ಸಿನಿಮಾ ಮಾಡಿದೆ ಅಂತ ಕಿಚ್ಚ ಹೇಳಿದ್ರು. 

ಇದರ ಜೊತೆಗೆ ಉಪ್ಪಿ ಹಾಗು ನಿರ್ಮಾಪಕ ಕೆ.ಪಿ ಶ್ರೀಕಾಂತ್ಗೂ ಕಾಮಿಡಿ ಮಾಡಿ ಕ್ವಾಟ್ಲೆ ಕೊಟ್ರು ಕಿಚ್ಚ. ಕಬ್ಜ ಪಾರ್ಟ್2 ಬರೋ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ಈಗ ಕಬ್ಜ ಟೀಂ ಕೂಡ ಪಾರ್ಟ್ 2 ಬಗ್ಗೆ ಸುಳಿವು ಕೊಡುತ್ತಿದ್ದಾರೆ. ಉಪೇಂದ್ರ ಕಬ್ಜ ಪಾರ್ಟ್-2ನಲ್ಲಿ ಕಿಚ್ಚನೇ ಲೀಡ್ ರೋಲ್‌ನಲ್ಲಿ ಇರಲಿ ಅಂತ ಓಪನ್ ಆಗೆ ಹೇಳಿದ್ರು. ಉಪ್ಪಿ ಮಾತು ಕೇಳಿದ್ರೆ ಕಬ್ಜ ಪಾರ್ಟ್-2 ಬರೋದು ನಿಜ ಅನ್ನೋ ಹಾಗಿತ್ತು. ಕಬ್ಜ ಸಿನಿಮಾ ಪರ ಭಾಷಾ ಸಿನಿ ಸ್ಟಾರ್ಸ್ ಮನ ಗೆದ್ದಿದೆ. ಕಬ್ಜ ಟ್ರೈಲರ್ ಬಂದಾಗ ಅಮಿತಾಬ್ರಿಂದ ಹಿಡಿದು ಟಾಲಿವುಡ್, ಕಾಲಿವುಡ್ ಸ್ಟಾರ್ಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಬ್ಜ ಬಗ್ಗೆ ಬರೆದುಕೊಂಡಿದ್ರು. 

ಇದೀಗ ಕಬ್ಜಕ್ಕೆ ಕನ್ನಡದ ಸ್ಟಾರ್ಸ್ ಸಾತ್ ಸಿಕ್ಕಿದೆ. ಕಬ್ಜ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಡಾಲಿ ಧನಂಜಯ್, ಹಾಗು ಲವ್ಲಿ ಸ್ಟಾರ್ ಪ್ರೇಮ್ ಕಬ್ಜ ಸಿನಿಮಾವನ್ನ ಯಾಕೆ ನೋಡಬೇಕು ಅಂತ ಹೇಳಿದ್ರು. ಕಬ್ಜ ಗ್ಯಾಂಗ್ ಸ್ಟರ್ ಸಿನಿಮಾ. ಈ ಮೂವಿಯಲ್ಲಿ ಉಪೇಂದ್ರ ಕಿಚ್ಚ ಶಿವಣ್ಣ ಮೂರು ಜನ ಇದ್ದಾರೆ. ಇವ್ರು ನಮ್ಮ ಕನ್ನಡ ಚಿತ್ರರಂಗದ ದೊಡ್ಡ ಗ್ಯಾಂಗ್ಸ್ಟರ್ಸ್. ಆದ್ರೆ ಡಾಲಿ ಅನ್ನೋ ಮತ್ತೊಬ್ಬ ಭಯಂಕರ ಗ್ಯಾಂಗ್ಸ್ಟರ್ನನ್ನೇ ಕಬ್ಜದಲ್ಲಿ ಬಿಟ್ಟಿದ್ದಾರೆ ಅಂತ ಕಾರ್ಯಕ್ರಮಕ್ಕೆ ಬಂದಿದ್ದ ಡಾಲಿ ಕೇಳಿದ್ರು. ಇದಕ್ಕೆ ರಿಯಲ್ ಸ್ಟಾರ್ ಉಪ್ಪಿ ಸರ್ಪ್ರೈಸ್ ಆಗಿ ಆನ್ಸರ್ನೂ ಕೊಟ್ರು. 

ಕಬ್ಜದಲ್ಲಿ ನಾನಿಲ್ಲ ಅಂತ ಡಾಲಿ ಧನಂಜಯ್ ಹೇಳಿದ ಮಾತಿಗೆ ಉಪೇಂದ್ರ ಆನ್ಸರ್ ಮಾಡುತ್ತಾ ‘ಕಬ್ಜ ಪಾರ್ಟ್ 2 ಚಿತ್ರದಲ್ಲಿ ನನ್ನನ್ನು ಅತಿಥಿ ಪಾತ್ರವಾಗಿ ಇಟ್ಟುಕೊಳ್ಳಿ. ಶಿವಣ್ಣ, ಸುದೀಪ್, ಡಾಲಿ ಧನಂಜಯ್, ಪ್ರೇಮ್ ನಟಿಸಲಿ ಅಂತ ಆರ್ ಚಂದ್ರುಗೆ ಹೇಳಿದ್ರು.  ವರ್ಲ್ಡ್ ವೈಡ್ ಕಬ್ಜ ಹವಾ ಹೇಳಿದೆ ಗೊತ್ತಾ.? ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಕೋಟಿ ಕೋಟಿ ಸಿನಿ ಮನಸ್ಸುಗಳು ಕಾಯ್ತಿವೆ. ಅದಕ್ಕಾಗಿ ಕನ್ನಡದ ಜೊತೆ ಒಟ್ಟು ಏಳು ಭಾಷೆಯಲ್ಲಿ ಏಕಕಾಲದಲ್ಲಿ ಕಬ್ಜ ತೆರೆ ಕಾಣುತ್ತಿದೆ. 50 ದೇಶಗಳು ಕಬ್ಜ ಸಿನಿಮಾವನ್ನ ಬರ ಮಾಡಿಕೊಳ್ಳುತ್ತಿವೆ. ಈ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿ ಮೂರು ದಿನದಲ್ಲಿ 7 ಕೋಟಿ ಬಾಕಿ ಕೊಂಡಿದೆ ಅಂತ ವರದಿ ಆಗಿದೆ. 

ಇನ್ನು ಎರಡು ದಿನ ಬಾಕಿ ಇದ್ದು ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಅಂದಾಜು 25 ಕೋಟಿ ದಾಟೋ ನಿರೀಕ್ಷೆ ಇದೆ. ಕಬ್ಜದಲ್ಲಿ ಒಂದೊಂದು ಕ್ಯಾರೆಕ್ಟರ್ಗಳು ಅದ್ಭುತ, ಕನ್ನಡದ ಜೊತೆಗೆ ತೆಲುಗು, ತಮಿಳುಮ ಹಿಂದಿಯ ಟ್ಯಾಲೆಂಟೆಡ್ ಕಲಾವಿಧರು ನಟಿಸಿದ್ದಾರೆ. ವಿಶೇಷ ಅಂದ್ರೆ ಕಬ್ಜದಲ್ಲಿ ಮಾಜಿ ಸಚಿವ ಹೆಚ್,ಎಂ ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಕೂಡ ಸೂಪರ್ ಕ್ಯಾರೆಕ್ಟರ್ ಒಂದನ್ನ ಮಾಡಿದ್ದಾರೆ. ‘ಲಕ್ಷ್ಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಅನೂಪ್ ರೇವಣ್ಣ, ಕಬ್ಜ ಕಿಂಗ್ ಉಪ್ಪಿಯ ಬಲಗೈ ಬಂಟನ ರೋಲ್ ಮಾಡಿದ್ದಾರೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ದಿನ ಕಬ್ಜ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.