ಸ್ಯಾಂಡಲ್‌ವುಡ್‌ನ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ್: ಕನ್ನಡದ ನಯಾ ನವರಸ ನಾಯಕ ಈ ಡಾಲಿ!

ಸ್ಯಾಂಡಲ್‌ವುಡ್‌ನ ಸ್ಪೆಷಲ್ ಹುಡುಗ ನಟ ಧನಂಜಯ್. ಸ್ಪೆಷಲ್ ಹುಡುಗ ಮಾತ್ರ ಅಲ್ಲ ನಟನೆಯಲ್ಲಿ ರಾಕ್ಷಸ. ಕನ್ನಡದಲ್ಲಿ ಹೀರೋ ಕಮ್ ವಿಲನ್ ಎರಡೂ ರೋಲ್ ಮಾಡ್ತಾ ಸಕ್ಸಸ್ ಕಾಣುತ್ತಿರೋ ಏಕೈಕ ಹೀರೋ ಯಾರಾದ್ರು ಇದ್ರೆ ಅದು ಧನಂಜಯ್. 

First Published Mar 30, 2023, 9:01 PM IST | Last Updated Mar 30, 2023, 9:01 PM IST

ಸ್ಯಾಂಡಲ್‌ವುಡ್‌ನ ಸ್ಪೆಷಲ್ ಹುಡುಗ ನಟ ಧನಂಜಯ್. ಸ್ಪೆಷಲ್ ಹುಡುಗ ಮಾತ್ರ ಅಲ್ಲ ನಟನೆಯಲ್ಲಿ ರಾಕ್ಷಸ. ಕನ್ನಡದಲ್ಲಿ ಹೀರೋ ಕಮ್ ವಿಲನ್ ಎರಡೂ ರೋಲ್ ಮಾಡ್ತಾ ಸಕ್ಸಸ್ ಕಾಣುತ್ತಿರೋ ಏಕೈಕ ಹೀರೋ ಯಾರಾದ್ರು ಇದ್ರೆ ಅದು ಧನಂಜಯ್. ಹೀಗಾಗಿ ನಮ್ ಡಾಲಿಗೆ ಈಗ ನವರಸ ನಟ ರಾಕ್ಷಸ ಅಂತ ಕರಿಬಹುದೇನೋ. ಡಾಲಿ ಬಗ್ಗೆ ಇಷ್ಟೆಲ್ಲಾ ಯಾಕ್ ಹೇಳ್ತಿದ್ದೇವೆ ಗೊತ್ತಾ.? ಧನಂಜಯ್ ನವರಸಗಳು ಇರೋ ರೋಲ್ ಮಾಡಿ ಸಕ್ಸಸ್ ಆಗಿರೋದಕ್ಕೆ. ಡಾಲಿ ಧನಂಜಯ್, ನವರಸಗಳನು ಗಟ ಗಟ ಕುಡಿದಿರೋ ಹೀರೋ. ಪಕ್ಕಾ ಫ್ಯಾಮಿಲಿ ಮ್ಯಾನ್, ಖಡಕ್ ವಿಲನ್, ಆಕ್ಷನ್ ಹೀರೋ, ಲವರ್ ಬಾಯ್, ಪೊಲೀಸ್ ಕಾಪ್, ಬಾಕ್ಸರ್, ಹಿಸ್ಟಾರಿಕಲ್ ಕ್ಯಾರೆಕ್ಟರ್ ಅಬ್ಬಬ್ಬ. ಡಾಲಿ ಮಾಡದೇ ಇರೋ ಪಾತ್ರಗಳೇ ಇಲ್ಲ. ಅಷ್ಟೆ ಯಾಕೆ? ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ  ವಿಸ್ಮಯ, ಶಾಂತ ಇವೆಲ್ಲಾ ಇರೋ ಪಾತ್ರಗಳು ಡಾಲಿ ಸಿನಿಮಾ ಟ್ಯಾಕ್ನಲ್ಲಿ ಸಿಗುತ್ತೆ. ಒಬ್ಬ ಪರಿಪೂರ್ಣ ಕಲಾವಿದ ಆಗಬೇಕು ಅಂದ್ರೆ ನವರಸಗಳಲ್ಲೂ ನಟಿಸಬೇಕು. ಆ ಕ್ಯಾಲಿಬರ್ ಡಾಲಿ ಬಳಿ ಇದೆ.  ಡಾಲಿ ಯಾವ್ ಯಾವ್ ಸಿನಿಮಾದಲ್ಲಿ ನವರಸಗಳಲ್ಲೂ ನಟಿಸಿದ್ದಾರೆ ಅಂತ ನೋಡೋದಾಡ್ರೆ...

ಶೃಂಗಾರ ರಸ - ಎರಡನೇ ಸಲ
ಹಾಸ್ಯ - ಜಮಾಲಿಗುಡ್ಡ  
ಕರುಣಾ - ರಾಟೆ 
ರೌಧ್ರ - ಟಗರು 
ವೀರ - ಹೆಡ್ಬುಷ್  
ಭಯಂಕರ - ಪುಷ್ಪ    
ಬೀಭತ್ಸ - ಭೈರವ ಗೀತಾ
ವಿಸ್ಮಯ - ಅಲ್ಲಮಪ್ರಭು
ಶಾಂತಿ - ಮಾನ್ಸುನ್ ರಾಗ

ಧನಂಜಯ್ ಎರಡನೇ ಸಲ ಸಿನಿಮಾದಲ್ಲಿ ಶೃಂಗಾರ ರಸ ಇರೋ ರೊಮ್ಯಾಂಟಿಕ್ ರೋಲ್ ಮಾಡಿದ್ರು. ಒನ್ಸ್ಅಪಾನ್ ಟೈಂ ಜಮಾಲಿಗುಡ್ಡ ಸಿನಿಮಾದಲ್ಲಿ  ಹಾಸ್ಯ ಪ್ರಧಾನ ಪಾತ್ರ ಮಾಡಿದ್ರು, ರಾಟೆ ಸಿನಿಮಾದಲ್ಲಿ ಪ್ರೀತಿ ವಾತ್ಸಲ್ಯ ತುಂಬಿದ್ದ ಕರುಣಾ ರಸದ ಅಭಿನಯ ಕೊಟ್ಟಿದ್ರು. ಟಗರು ಸಿನಿಮಾದಲ್ಲಿ ರೌಧ್ರ ರಸದಲ್ಲಿ ವಿಲನ್ ಆಗಿ ವಿಜೃಂಭಿಸಿದ್ರು. ಹೆಡ್ ಬುಷ್ ಸಿನಿಮಾದಲ್ಲಿ ವೀರನಂತೆ ವೀರ ರಸದಲ್ಲಿ ನಟಿಸಿದ್ರು. ಪುಷ್ಪ ಸಿನಿಮಾದಲ್ಲಿ ಭಯಾನಯ ರಸದಲ್ಲಿ ಮೇಳೈಸಿದ್ರು. ಭೈರವ ಗೀತಾ ಸಿನಿಮಾ ಬೀಬತ್ಸ ರಸದ ಅಭಿನಯ ಮಾಡಿದ್ರು. ಅಲ್ಲಮಪ್ರಭು ಸಿನಿಮಾದಲ್ಲಿ ವಿಸ್ಮಯ ರಸದಲ್ಲಿ ನಟಿಸಿದ್ರೆ ಮಾನ್ಸುನ್ ರಾಗ ಸಿನಿಮಾದಲ್ಲಿ ಶಾಂತಿಯುತರ ರೋಲ್ ಮಾಡಿದ್ರು. ವಿಭಿನ್ನ ಪಾತ್ರಗಳ ಸರದಾರ ಡಾಲಿ ಧನಂಜಯ್ ಈಗ ಗುರುದೇವ ಹೊಯ್ಸಳ ಸಿನಿಮಾ ಮಾಡುತ್ತಿದ್ದಾರೆ. ಈ ಮೂವಿಯಲ್ಲಿ ಡಾಲಿ ಟಫ್ ಪೊಲೀಸ್ ಕಾಪ್ ರೋಲ್ನಲ್ಲಿ ಮಿಂಚುತ್ತಿದ್ದಾರೆ.  ಮಾರ್ಚ್ 30ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ.  ಗುರುದೇವ ಹೊಯ್ಸಳ ಸಿನಿಮಾ ಮೂಲಕ ತನ್ನ ಸಿನಿ ಖರಿಯರ್ರ 25ನೆ ಸಿನಿಮಾ ಮೆಟ್ಟಿಲು ಹತ್ತುತ್ತಿದ್ದಾರೆ.

Video Top Stories