Asianet Suvarna News Asianet Suvarna News

ಬರ್ತಡೆ ದಿನ ಪಕ್ಕ ನಿಂತವಗೆ ದರ್ಶನ್ ಕಪಾಳ ಮೋಕ್ಷ ಇದೊಂದು ಪಾಠ!

ಅಭಿಮಾನಿಗಳೊಂದಿಗೆ ದರ್ಶನ್ ಬರ್ತಡೆ/ ಹರಿದು ಬಂದ ಅಭಿಮಾನಿ ಸಾಗರ/ ಎಲ್ಲೆಲ್ಲೂ ಚಾಲೆಂಜಿಂಗ್ ಸ್ಟಾರ್ ಹವಾ/ ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠ ಹೇಳಿದ ಸೂಪರ್ ಸ್ಟಾರ್

ಬೆಂಗಳೂರು(ಫೆ. 16)  ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಸುಲ್ತಾನ ದರ್ಶನ್ ಜನ್ಮದಿನ ಅಂದರೆ ಕೇಳಬೇಕೆ ಅದು ಅಭಿಮಾನಿಗಳಿಗೆ ಹಬ್ಬ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.

ರಾಬರ್ಟ್ ಸಿನಿಮಾದಿಂದ ಬಂತು ಶುಭ ಸುದ್ದಿ

ಈ ವೇಳೆ ದರ್ಶನ್ ಅಭಿಮಾನಿಗಳಿಗೆ ದರ್ಶನ ನೀಡಿದರು. ಜತೆಗೆ ಒಬ್ಬೊಬ್ಬರಿಗೂ ಕೈ ನೀಡಿ ಮಾತನಾಡಿಸಿ ಮುಂದೆ ಕಳುಹಿಸುತ್ತಿದ್ದರು. ಈ ವೇಳೆ ದರ್ಶನ್ ಪಕ್ಕದಲ್ಲಿದ್ದ ವ್ಯಕ್ತಿ ಅಭಿಮಾನಿಗಳನ್ನು ಮುಂದೆ ತಳ್ಳಿದಾಗ ಕೊಂಚ ಕೋಪಗೊಂಡ ದಾಸ ಆತನ ತಲೆಗೆ ಒಂದು ಏಟು ಹಾಕಿ ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಪಾಠ ಹೇಳಿದರು. ದಾಸ ದರ್ಶನ್ ಅವರಿಗೆ ನಮ್ಮ ಕಡೆಯಿಂದಲೂ ಜನ್ಮದಿನದ ಶುಭಾಶಯ.

Video Top Stories