Asianet Suvarna News Asianet Suvarna News

'ಸಲಗ'ಕ್ಕೆ ಅಭಿಮಾನಿಗಳು ಫಿದಾ, ಮೊದಲ ಪ್ರಯತ್ನದಲ್ಲೇ ಗೆದ್ದ ವಿಜಯ್!

Oct 17, 2021, 9:03 AM IST

ಬೆಂಗಳೂರು (ಅ. 17): ಬಹಳ ದಿನಗಳಿಂದ ಚಿತ್ರರಂಗ ಕಾಯುತ್ತಿದ್ದ ಸ್ಟಾರ್‌ ಸಿನಿಮಾ 'ಸಲಗ'ವನ್ನು (Salaga) ಕನ್ನಡ ಚಿತ್ರರಸಿಕರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ.   ದುನಿಯಾ ವಿಜಯ್‌ (Duniya Vijay) ಅಭಿನಯದ ಸಲಗ ಚಿತ್ರಕ್ಕೆ ವಿಜಯ್‌ ಅಭಿಮಾನಿಗಳು ಮತ್ತು ಮಾಸ್‌ (Mass) ಚಿತ್ರಕ್ಕಾಗಿಯೇ ಕಾಯುತ್ತಿದ್ದ ರಸಿಕರು ಇನ್ನಿಲ್ಲದಂತೆ ಮುಗಿಬಿದ್ದರು. ಕರ್ನಾಟಕದ ಎಲ್ಲ ಕೇಂದ್ರಗಳಲ್ಲೂ ‘ಸಲಗ’ ತುಂಬಿದ ಚಿತ್ರಮಂದಿರಗಳ ಪ್ರದರ್ಶನ ಕಂಡಿತು. ಬಿಡುಗಡೆಯಾದ 200 ಚಿತ್ರಮಂದಿರಗಳ 1200 ಪ್ರದರ್ಶನಗಳೂ ಮೊದಲ ದಿನ ತುಂಬಿದ್ದವು.

ಅ ಮೂವರಿಂದ ಕೋಟಿಗೊಬ್ಬ-3 ಗೆ ಅಡ್ಡಿ: ಕಿಚ್ಚ ಎಕ್ಸ್‌ಕ್ಲೂಸಿವ್ ಮಾತು

'ನಿರ್ದೇಶನ ನನಗೆ ಸಿಕ್ಕಿರುವ ಒಳ್ಳೆಯ ಅವಕಾಶ. ಅದನ್ನು ತುಂಬಾ ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಅನುಭವ ಮಾತಿನಲ್ಲಿ ಹೇಳಕ್ಕೆ ಆಗಲ್ಲ. ಆದರೆ, ಪ್ರೇಕ್ಷಕರು ನೋಡಿ ಗುಡ್‌, ಚೆನ್ನಾಗಿದೆ ಎಂದಾಗ ಅದೇ ನಮ್ಮ ಅನುಭವ ಆಗುತ್ತದೆ. ಸುಲಭ ಅಂತ ಯಾವುದೂ ಇಲ್ಲ. ಎರಡೂ ಸವಾಲು. ಅದರಲ್ಲೂ ನನ್ನ ಲೈಫ್‌ನ ಡ್ರೈವ್‌ ಮಾಡೋ ಸಿನಿಮಾ ಇದು. ಹೀಗಾಗಿ ಹೆಚ್ಚಿನ ಸವಾಲುಗಳನ್ನೇ ಎದುರಿಸುತ್ತಾ ಈ ಸಿನಿಮಾ ಮಾಡಿದ್ದೇನೆ' ಎಂದು ದುನಿಯಾ ವಿಜಯ್ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಹೇಳಿದ್ದಾರೆ.