'ಯಶ್ 19' ಸಿನಿಮಾದ ಫೋಟೋ ರಿವೀಲ್?: ಸಖತ್ ಟ್ರೆಂಡ್ ಆಗ್ತಿದೆ ರಾಕಿಭಾಯ್ ಫೋಟೋ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷವೇ ಕಳೆದಿದ್ದರೂ ಅವರ ಮುಂದಿನ ಸಿನಿಮಾ ಬಗ್ಗೆ ಒಂದೇ ಒಂದು ಅಪ್ಡೇಟ್ ಕೂಡ ಸಿಕ್ಕಿಲ್ಲ. ಸಾಮಾನ್ಯವಾಗಿ ಹಿರೋಗಳ ಮುಂದಿನ ಚಿತ್ರದ ಡೈರೆಕ್ಟರ್ ಯಾರು ಎನ್ನುವ ವಿಚಾರ ಲೀಕ್ ಆಗಿ ಬಿಡುತ್ತದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷವೇ ಕಳೆದಿದ್ದರೂ ಅವರ ಮುಂದಿನ ಸಿನಿಮಾ ಬಗ್ಗೆ ಒಂದೇ ಒಂದು ಅಪ್ಡೇಟ್ ಕೂಡ ಸಿಕ್ಕಿಲ್ಲ. ಸಾಮಾನ್ಯವಾಗಿ ಹಿರೋಗಳ ಮುಂದಿನ ಚಿತ್ರದ ಡೈರೆಕ್ಟರ್ ಯಾರು ಎನ್ನುವ ವಿಚಾರ ಲೀಕ್ ಆಗಿ ಬಿಡುತ್ತದೆ. ಆದರೆ, ‘ಯಶ್ 19’ ವಿಚಾರದಲ್ಲಿ ಅಂತೆಕಂತೆಗಳು ಹುಟ್ಟಿಕೊಳ್ಳುತ್ತಿವೆ. ಈಗ ‘ಯಶ್ 19’ ಸಿನಿಮಾ ಸೆಟ್ನದ್ದು ಎನ್ನಲಾದ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಯಶ್ 19ನೇ ಚಿತ್ರಕ್ಕೆ ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋ ಯಶ್ 19 ಸಿನಿಮಾದ್ದು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಇದು ಸತ್ಯನಾ ಅಂತಾ ಫ್ಯಾನ್ಸ್ ಕೇಳುತ್ತಿದ್ದು, ಟ್ರೆಂಡ್ ಸಹ ಆಗುತ್ತಿದೆ.