Asianet Suvarna News Asianet Suvarna News

UI ಮೇಕಿಂಗ್ ಹೇಳುತ್ತಿದೆ 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ: ಹೊಸ ವರ್ಷಕ್ಕೆ ಯುಐ ಗ್ಲಿಮ್ಸ್ ಕೊಟ್ಟ ರಿಯಲ್ ಸ್ಟಾರ್!

ವಿಭಿನ್ನ ಶೈಲಿಯ ಸಿನಿಮಾ ಕಟ್ಟಿಕೊಟ್ಟು ಪ್ರೇಕ್ಷಕರ ತಲೆಗೆ ಹುಳ ಬಿಡೋ ಸ್ಟಾರ್ ಡೈರೆಕ್ಟರ್ ರಿಯಲ್ ಸ್ಟಾರ್ ಉಪೇಂದ್ರ. ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ಅಂದ್ರೆ ರಿಯಲ್ ಫ್ಯಾನ್ಸ್ ಬಳಗದಲ್ಲಿ ಆ ಸಿನಿಮಾ ಮೇಲಿನ ನಿರೀಕ್ಷೆ ಮೌಂಟ್ ಎವರೆಸ್ಟ್‌ ಎಷ್ಟಿರುತ್ತೆ.

ವಿಭಿನ್ನ ಶೈಲಿಯ ಸಿನಿಮಾ ಕಟ್ಟಿಕೊಟ್ಟು ಪ್ರೇಕ್ಷಕರ ತಲೆಗೆ ಹುಳ ಬಿಡೋ ಸ್ಟಾರ್ ಡೈರೆಕ್ಟರ್ ರಿಯಲ್ ಸ್ಟಾರ್ ಉಪೇಂದ್ರ. ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ಅಂದ್ರೆ ರಿಯಲ್ ಫ್ಯಾನ್ಸ್ ಬಳಗದಲ್ಲಿ ಆ ಸಿನಿಮಾ ಮೇಲಿನ ನಿರೀಕ್ಷೆ ಮೌಂಟ್ ಎವರೆಸ್ಟ್‌ ಎಷ್ಟಿರುತ್ತೆ. ಹೀಗಾಗಿ ಉಪೇಂದ್ರ ನಿರ್ದೇಶನದ ಸಿನಿಮಾ ಬಂದಾಗೆಲ್ಲಾ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಫ್ಯಾನ್ಸ್ ಡಾನ್ಸ್ ಮಾಡಿ ಸಂಭ್ರಮಿಸುತ್ತಾರೆ. ಈಗ ಈ ಸೂಪರ್ ಡೈರೆಕ್ಟರ್ ನಿರ್ದೇಶನದ ಯುಐ ಸಿನಿಮಾ ಶೂಟಿಂಗ್ನ ಚಿಕ್ಕದೊಂದು ಗ್ಲಿಮ್ಸ್ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವಂತೆ ಮಾಡುತ್ತಿದೆ. ಹಾಗಾದ್ರೆ ಯುಐನ ಗ್ಲಿಮ್ಸ್‌ನಲ್ಲಿ ಏನೆಲ್ಲಾ ಇದೆ.? ಜೆಸ್ಟ್ ಹ್ಯಾವ್ ಅ ಲುಕ್. 

ರಿಯಲ್ ಸ್ಟಾರ್ ಉಪೇಂದ್ರರ ರಿಯಲ್ ಅಭಿಮಾನಿಗಳ ಕನಸು ಮನಸಾಗಿದ್ದದ್ದು ನಮ್ ಬಾಸ್ ಸಿನಿಮಾನ ಡೈರೆಕ್ಷನ್ ಮಾಡಬೇಕು. ಆ ಸಿನಿಮಾ ನೋಡಿ ಎಂಜಾಯ್ ಮಾಡ್ಬೇಕು ಅನ್ನೋ ಆಸೆ. ಆ ಆಸೆಗೆ ಅಮೃತದಂತೆ ಈಗ ಯುಐ ಸಿನಿಮಾ ಸಿದ್ಧವಾಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು ಕ್ಯಾಮೆರಾ ಮುಂದೆ ನಟಿಸುತ್ತಾ, ಅದೇ ಕ್ಯಾಮೆರಾ ಹಿಂದೆ ನಿಂತು ಆಕ್ಷನ್ ಕಟ್ ಎನ್ನುತ್ತಿದ್ದಾರೆ. ಇದೀಗ ಹೊಸ ವರ್ಷದ ಹೊಸ್ತಿಲಲ್ಲಿ ಯುಐ ಸಿನಿಮಾದ ಚಿಕ್ಕದೊಂದು ಗ್ಲಿಮ್ಸ್ ಬಿಟ್ಟಿದ್ದಾರೆ. ಯುಐನ ಈ ಮೇಕಿಂಗ್ ಗ್ಲಿಮ್ಸ್ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವಂತಿದೆ. ಯುಐ ಟೈಟಲ್ ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುದುಗಿಟ್ಟಿದೆ. ಟೈಟಲ್ ಫಸ್ಟ್ ಲುಕ್ ನೋಡಿಯೇ ಉಪ್ಪಿ ಫ್ಯಾನ್ಸ್ ತಲೆ ಗಿರ್ ಎಂದಿದೆ. 

ಇದೀಗ 32 ಸೆಕೆಂಡ್‌ನ ಮೇಕಿಂಗ್ ಗ್ಲಿಮ್ಸ್ ಕೂಡ ನಿಮ್ಮ ಮೆದುಳಿಗೆ ಕೈ ಹಾಕಿಕೊಂಡು ಪರಪರ ಅಂತ ಕೆರೆದುಕೊಳ್ಳೋ ಹಾಗೆ ಮಾಡಿದೆ. ಈ ಮೇಕಿಂಗ್ನಲ್ಲಿ ಕ್ಯಾಮೆರಾ ರೋಲಿಂಗ್ ಸಖತ್ ಆಗಿ ಮಾಡಲಾಗಿದೆ. ಉಪ್ಪಿ, ಮಾನಿಟರ್ ಪ್ಲೀಸ್, 360, ಲೈಟ್ಸ್, ಸ್ಮೋಕ್, ಆಕ್ಷನ್ ಎನ್ನುತ್ತಲೇ ಒಂದೊಂದೇ ವಿಶ್ಯುವಲ್ ಡಿಸ್ಪ್ಲೇ ಆಗುತ್ತೆ. ಈ ಮೇಕಿಂಗ್ ನೋಡಿದ್ರೆ ಯುಐ ಪ್ಯಾನ್ ಇಂಡಿಯಾದಲ್ಲಿ ಸಜ್ಜಾಗುತ್ತಿದೆ ಅನ್ನೋದು ಗೊತ್ತಾಗುತ್ತೆ. ಕೆ.ಪಿ ಶ್ರೀಕಾಂತ್ ನಿರ್ಮಾಣದ ಯುಐ ಕನ್ನಡ ಹಿಂದಿ, ತಮಿಳು, ಮಲೆಯಾಳಂ ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ. ಯುಐನಲ್ಲಿ ಉಪೇಂದ್ರ ನಟ ಕಮ್ ನಿರ್ದೇಶಕ, ಕೆ.ಪಿ ಶ್ರೀಕಾಂತ್ ನಿರ್ಮಾಪಕ ಅನ್ನೋದರನ್ನ ಹೊರತುಪಡಿಸಿ ಮತ್ತಿನ್ಯಾರೆಲ್ಲಾ ಚಿತ್ರದಲ್ಲಿದ್ದಾರೆ ಅನ್ನೋ ಗುಟ್ಟು ಇದುವರೆಗೂ ರಟ್ಟಾಗಿಲ್ಲ. ಯುಐ ಶೂಟಿಂಗ್ 50ರಷ್ಟು ಮುಗಿದಿದ್ರು ನಾಯಕಿ ಯಾರೆಂದು ರಿವೀಲ್ ಮಾಡಿಲ್ಲ ಉಪೇಂದ್ರ. ಹೀಗಾಗಿ ಯುಐ ಬಗ್ಗೆ ರೀಯಲ್ ಫ್ಯಾನ್ಸ್ ನಿರೀಕ್ಷೆ ಬೇರೆ ಲೆವೆಲ್‌ಗೆ ರೀಚ್ ಆಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories