ಬೆಳ್ಳಿತೆರೆಯಲ್ಲಿ ಮ್ಯಾಜಿಕ್ ಮಾಡಲು ಬರ್ತಿದೆ 'ರೆಮೋ': 250 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್!
ಅಪ್ಪಟ ಹಳ್ಳಿ ಸೊಗಡಿನ ರಾ ಕಂಟೆಂಟ್ ಸಿನಿಮಾ ಕಾಂತಾರ ಗೆದ್ದಾಯ್ತು. ಈಗ ಗೆಲುವಿಗೆ ಟೈಂ ಕೂಡಿ ಬಂದಿರೋದು ಪಕ್ಕಾ ಸಿಟಿ ಲೈಫ್ನ ಕಂಟೆಂಟ್ ಇರೋ ರೆಮೋ ಸಿನಿಮಾಗೆ. ಹೌದು, ಈಗಿನ ಟ್ರೆಂಡ್‌ನ ಮ್ಯೂಸಿಕಲ್ ಲವ್ ಸ್ಟೋರಿ ರೆಮೋ ಸಿನಿಮಾ ಇದೇ ವಾರ ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಮ್ಯಾಜಿಕ್ ಮಾಡಲು ಸಿದ್ಧವಾಗಿದೆ.
ಅಪ್ಪಟ ಹಳ್ಳಿ ಸೊಗಡಿನ ರಾ ಕಂಟೆಂಟ್ ಸಿನಿಮಾ ಕಾಂತಾರ ಗೆದ್ದಾಯ್ತು. ಈಗ ಗೆಲುವಿಗೆ ಟೈಂ ಕೂಡಿ ಬಂದಿರೋದು ಪಕ್ಕಾ ಸಿಟಿ ಲೈಫ್ನ ಕಂಟೆಂಟ್ ಇರೋ ರೆಮೋ ಸಿನಿಮಾಗೆ. ಹೌದು, ಈಗಿನ ಟ್ರೆಂಡ್‌ನ ಮ್ಯೂಸಿಕಲ್ ಲವ್ ಸ್ಟೋರಿ ರೆಮೋ ಸಿನಿಮಾ ಇದೇ ವಾರ ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಮ್ಯಾಜಿಕ್ ಮಾಡಲು ಸಿದ್ಧವಾಗಿದೆ. ಈ ಸಿನಿಮಾದ ಮಸ್ತ್ ಮನೊರಂಜನೆ ಹೇಗಿರುತ್ತೆ ಅನ್ನೋದಕ್ಕೆ ಈಗ ರಿಲೀಸ್ ಆಗಿರೋ ಮೇಕಿಂಗ್ ಸಾರಿ ಹೇಳುತ್ತಿದೆ. ಆರಡಿ ಎತ್ತರ ಹೀರೋ ಇಶಾನ್ ಹಾಗು ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ರೆಮೋದಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿ, ರೋಮಿಯೋ ಜ್ಯೂಲೆಟ್ ರೀತಿ ಲವ್ ಮಾಡಿ ಮಸ್ತ್ ಮನೊರಂಜನೆ ಕೊಡಲಿದ್ದಾರೆ. ರೆಮೋ ಸಿನಿಮಾದ ಟ್ರೈಲರ್ ನೋಡಿದವರು ಈ ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗೋದು ಗ್ಯಾರಂಟಿ ಅನ್ನೋ ರಿಸಲ್ಟ್ ಕೊಟ್ಟಿದ್ದಾರೆ.
ಆ ಮಟ್ಟಕ್ಕೆ ಆರಡಿ ಎತ್ತರದ ಇಶಾನ್ ಕಮಾಲ್ ಮಾಡಿದ್ದಾರೆ. ರೆಮೋ ಟ್ರೈಲರ್ ನೋಡಿಯೇ ಇಶಾನ್‌ಗೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಜಾಕ್ಪಾಟ್ ಹೊಡೆದಿದೆ. ಯಾಕಂದ್ರೆ ಜೇಮ್ಸ್ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಇಶಾನ್‌ಗೆ ಆಕ್ಷನ್ ಕಟ್ ಹೇಳೋದು ಫೈನಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಭಜರಂಗಿ ಖ್ಯಾತಿಯ ಎ ಹರ್ಷ, ಹಾಗು ರ್ಯಾಂಬೋ ಸಿನಿಮಾ ಫೇಮಸ್‌ನ ನಿರ್ದೇಶಕ ಅನಿಲ್ ಮತ್ತು ಕೆಜಿಎಫ್‌ನಲ್ಲಿ ಕೆಲಸ ಮಾಡಿರೋ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ಮಾತುಕಥೆ ಮಾಡಿದ್ದಾರೆ. ರೆಮೋ ಸಿನಿಮಾದ ಬಗ್ಗೆ ಇಂಡಸ್ಟ್ರಿಯಲ್ಲಿ ಪಾಸಿಟೀವ್ ವೈಬ್ರೇಷನ್ ಇದೆ. ಪವನ್ ಒಡೆಯರ್ ನಿರ್ದೇಶನದ ರೆಮೋಗೆ ಈಗ ಸೆನ್ಸಾರ್ ಆಗಿದ್ದು, ಕುಟುಂಬ ಸಮೇತ ಬಂದು ಈ ಸಿನಿಮಾ ನೋಡೋಬಹುದು ಅಂತ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೇಟ್ ಕೊಟ್ಟಿದೆ. ಫ್ಯಾಷನಿಟ್ ನಿರ್ಮಾಪಕ ಸಿ.ಆರ್ ಮನೋಹರ್ ಬಂಡವಾಳ ಹೂಡಿರೋ ರೆಮೋ ನೆವೆಂಬರ್ 25ಕ್ಕೆ ರಾಜ್ಯದ 250 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment