Asianet Suvarna News Asianet Suvarna News

ಅಪ್ಪು ಕರ್ನಾಟಕದ ಜನತೆಗೆ ನೀಡಿದ್ದ ಸಂದೇಶ ಇದು: ರಿಷಬ್‌, ರಕ್ಷಿತ್‌

ನಟರಾದ ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಗಂಧದ ಗುಡಿ ಪ್ರೀಮಿಯರ್​ ಶೋ ವೀಕ್ಷಿಸಿ ಪುನೀತ್​ ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಈ ಸಿನಿಮಾವವನ್ನು ನೋಡಬೇಕು ಎಂದು ತಿಳಿಸಿದ್ದಾರೆ.

First Published Oct 28, 2022, 1:40 AM IST | Last Updated Oct 28, 2022, 1:40 AM IST

ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ಚಿತ್ರ ಗಂಧದ ಗುಡಿ ಸಾಕ್ಷ್ಯಚಿತ್ರ ಬಹಳ ಅದ್ದೂರಿಯಾಗಿ ರಿಲೀಸ್​ ಆಗಿದೆ.ಅಲ್ಲದೇ ಇದು ಅವರ ಕನಸಿನ ಪ್ರಾಜೆಕ್ಟ್​. ಆ ಕಾರಣದಿಂದ ಅಪ್ಪು ಅಭಿಮಾನಿಗಳು ಗಂಧದ ಗುಡಿ ಜೊತೆ ಭಾವುಕವಾಗಿ ಕನೆಕ್ಟ್​ ಆಗುತ್ತಿದ್ದಾರೆ. ಅಕ್ಟೋಬರ್​ 28ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಅಕ್ಟೋಬರ್​ 27ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಯಿತು. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ದೊಡ್ಡ ಪರದೆ ಮೇಲೆ ಗಂಧದ ಗುಡಿ ನೋಡಿ ಎಲ್ಲರೂ ಎಮೋಷನಲ್​ ಆಗಿದ್ದಾರೆ. ನಟರಾದ ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಕೂಡ ಪ್ರೀಮಿಯರ್​ ಶೋ ವೀಕ್ಷಿಸಿ ಅಪ್ಪು ಬಗ್ಗೆ ಮಾತನಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ರಾಜ್ಯಕ್ಕೆ ನೀಡಿದ ಶ್ರೇಷ್ಠ ಸಂದೇಶ ಈ ಚಿತ್ರದಲ್ಲಿದೆ ಎಂದು ನಿರ್ದೇಶರ ರಿಷಬ್‌ ಶೆಟ್ಟಿ ಹೇಳಿದರೆ, ಪುನೀತ್‌ ರಾಜ್‌ಕುಮಾರ್ ಅವರು ಬಹುಶಃ ಕರ್ನಾಟಕದ ಜನತೆಗೆ ಹೇಳಬೇಕಂತಿದ್ದ ಸಂದೇಶ ಇದು ಎಂದು ನನಗಸಿದೆ ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. ಜೊತೆಗೆ ಎಲ್ಲರೂ ಈ ಸಿನಿಮಾವವನ್ನು ನೋಡಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment