Asianet Suvarna News Asianet Suvarna News

James Pre Release Event: ಅಪ್ಪುವನ್ನು ಹುಡುಕಿಕೊಂಡು ಹೊರಡುವೆ ಎಂದ ರಾಘಣ್ಣ, ಶಿವಣ್ಣ ಕಣ್ಣೀರು

ಮಾರ್ಚ್ 17 ಕ್ಕೆ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮಾರ್ಚ್ 13 ರಂದು ಅರಮನೆ ಮೈದಾನದಲ್ಲಿ ಪ್ರೀರಿಲೀಸ್ ಈವೆಂಟ್ ನಡೆಯಿತು. ಅಭಿಮಾನಿಗಳು, ಅಪ್ಪು ಹೆಸರಿನಲ್ಲಿ ಸಂಭ್ರಮಿಸಿದರು. ದೊಡ್ಮನೆ ಕುಟುಂಬದವರು, ಭಾವುಕರಾದರು. 

First Published Mar 14, 2022, 10:50 AM IST | Last Updated Mar 14, 2022, 11:15 AM IST

ಬೆಂಗಳೂರು (ಮಾ. 14): ಮಾರ್ಚ್ 17 ಕ್ಕೆ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮಾರ್ಚ್ 13 ರಂದು ಅರಮನೆ ಮೈದಾನದಲ್ಲಿ ಪ್ರೀರಿಲೀಸ್ ಈವೆಂಟ್ ನಡೆಯಿತು. ಅಭಿಮಾನಿಗಳು, ಅಪ್ಪು ಹೆಸರಿನಲ್ಲಿ ಸಂಭ್ರಮಿಸಿದರು. ದೊಡ್ಮನೆ ಕುಟುಂಬದವರು, ಭಾವುಕರಾದರು. 

Puneeth Rajkumar James:ಅಪ್ಪು ಜೇಮ್ಸ್‌ಗೆ ಸಿಂಗಾರಗೊಂಡ ದಾವಣಗೆರೆ

ಪ್ರೀ ರಿಲೀಸ್ ಈವೆಂಟ್‌ನಲ್ಲಿ ಜೇಮ್ಸ್ ಟೀಸರ್, ಟ್ರೇಲರ್ ರಿಲೀಸ್ ಮಾಡಲಾಯ್ತು. ಈ ಸಂದರ್ಭದಲ್ಲಿ, ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ನಮಗೆ ಅವನನ್ನು ಬಿಟ್ಟು ಇರೋಕೆ ಆಗಲ್ಲ, ಅವನನ್ನೇ ಹುಡುಕಿಕೊಂಡು ಹೊರಡುತ್ತೇನೆ ಎಂದು ಹೇಳಿದಾಗ, ಶಿವಣ್ಣ ಕಣ್ಣೀರಿಟ್ಟರು.