Asianet Suvarna News Asianet Suvarna News

ಸಂಗೀತದ ಮೇರು ಶಿಖರ ಎಸ್‌ಪಿಬಿಗೆ ಗೋಡ್ಕಿಂಡಿಯವರಿಂದ ಸ್ವರ ನಮನ

ಸಂಗೀತದ ಮೇರು ಶಿಖರ, ಸ್ವರ ಮಾಂತ್ರಿಕ, ವಿಧೇಯತೆಯ ಸಾಕಾರ ಮೂರ್ತಿ ಎಸ್‌ಪಿಬಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ಧೀಮಂತ ವ್ಯಕ್ತಿತ್ವದ ಮುಂದೆ ಪದಗಳೇ ಸಾಲುತ್ತಿಲ್ಲವೇನೋ ಅನ್ನುವ ಹಾಗೆ ಭಾಸವಾಗುತ್ತದೆ.

ಬೆಂಗಳೂರು (ಸೆ. 26): ಸಂಗೀತದ ಮೇರು ಶಿಖರ, ಸ್ವರ ಮಾಂತ್ರಿಕ, ವಿಧೇಯತೆಯ ಸಾಕಾರ ಮೂರ್ತಿ ಎಸ್‌ಪಿಬಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ಧೀಮಂತ ವ್ಯಕ್ತಿತ್ವದ ಮುಂದೆ ಪದಗಳೇ ಸಾಲುತ್ತಿಲ್ಲವೇನೋ ಅನ್ನುವ ಹಾಗೆ ಭಾಸವಾಗುತ್ತದೆ. ಸಂಗೀತವೇ ನನ್ನ ಉಸಿರು ಎಂದು ಸತತ 5 ದಶಕಗಳ ಕಾಲ ಸಂಗೀತದ ಆರಾಧನೆ ಮಾಡಿದ ಸರಸ್ವತಿ ಪುತ್ರ. 

ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತಿಮ ನಮನ ಸಲ್ಲಿಸುವುದು ಒಂದು ಕಡೆಯಾದರೆ, ಕಡೆಯವರೆಗೂ ತಮ್ಮ ಉಸಿರಾಗಿಸಿಕೊಂಡಿದ್ದ ಸಂಗೀತದ ಮೂಲಕ ನಮನ ಸಲ್ಲಿಸಲಾಯಿತು. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ನೆಚ್ಚಿನ ಗುರುವಿಗೆ ಕೊಳಲು ನುಡಿಸಿ ನಮನ ಸಲ್ಲಿಸಿದರು. ಎಸ್‌ಪಿಬಿ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.