Indie Scoop ನಲ್ಲಿ ಈ ವಾರ ಕಾಣಿಸಿಕೊಂಡ ಮೂವರು ಹೊಸ ಪ್ರತಿಭೆಗಳು
ಇಂಡಿಗೋ ಮ್ಯೂಸಿಕ್ ಡಾಟ್ ಕಾಮ್‌ನ ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ ಸ್ವತಂತ್ರ ಕಲಾವಿದರನ್ನು ಪರಿಚಯಿಸಲಾಗುತ್ತಿದೆ. ಈ ಬಾರಿ ಒಬ್ಬಾಕೆ ಬೆಂಗಳೂರಿನ ಕಲಾವಿದೆ ಸೇರಿ ಮೂವರು ಭಾಗವಹಿಸಿದ್ದಾರೆ.
ಬೆಂಗಳೂರು (ಅ.28): ಇಂಡಿಗೋ ಮ್ಯೂಸಿಕ್ ಡಾಟ್ ಕಾಮ್‌ನ ( indigomusic.com) ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ ಸ್ವತಂತ್ರ ಕಲಾವಿದರನ್ನು ಪರಿಚಯಿಸಲಾಗುತ್ತಿದೆ. IndigoMusic.com ಸ್ವತಂತ್ರ ಕಲಾವಿದರು ಮತ್ತು ಮನೆಯಲ್ಲಿ ಬೆಳೆದ (Home Grown) ಪ್ರತಿಭೆಗಳಿಗೆ ತಮ್ಮ ಸಂಗೀತವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ. ಈ ವಾರದ ಕಾರ್ಯಕ್ರಮದಲ್ಲಿ ಮುಂಬೈನ ಸಾಹಿಲ್ ಭಾರ್ಗವ , ಎರಡನೇಯದಾಗಿ ಬೆಂಗಳೂರಿನ ನೋವಾ ಆವಂತ್ ಕಾರ್ , ಮೂರನೆಯದಾಗಿ ಭಾರತೀಯ ಮೂಲದ ಕೆನಡಾದ ಸಾಶಾ ತಿರುಪತಿ ಅವರು ಈ ವಾರದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ನೀವು ಕೂಡ ಸ್ವತಂತ್ರ ಕಲಾವಿದರಾಗಿದ್ದು ಇಂಡಿಗೋ ಮ್ಯೂಸಿಕ್ ಡಾಟ್ ಕಾಮ್‌ನ ಇಂಡಿ ಸ್ಕೂಪ್‌ನಲ್ಲಿ ಭಾಗವಹಿಸಲು ಇಚ್ಛಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂಡಿಗೋ ಮ್ಯೂಸಿಕ್ ಫಾಲೋ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.