Asianet Suvarna News Asianet Suvarna News

Indie Scoop ಪ್ರತಿಭೆಗಳ ಅನಾವರಣ, ಬೆಂಗಳೂರಿನ ಜೊಯೆಲ್ ಹಾಗೂ ಇಶಿತಾ ಸಂಗೀತಕ್ಕೆ ಮನಸೋತ ಜನ!

ಪ್ರತಿಭೆಗಳ ಅನಾವರಣ, ಅರ್ಹರಿಗೆ ಸೂಕ್ತ ವೇದಿಕೆ ಒದಗಿಸುತ್ತಾ, ಸಂಗೀತ ಲೋಕದಲ್ಲಿ ಸಂಚರಿಸುತ್ತಿರುವ ಇಂಡಿ ಸ್ಕೂಪ್ ವಿಶೇಷ ಪ್ರಯತ್ನದಲ್ಲಿ ಈ ವಾರ ಇಬ್ಬರ ಪರಿಚಯ ನಿಮಗಾಗಿ.

ಬೆಂಗಳೂರು(ನ.25): ಇಂಡಿಗೋ ಮ್ಯೂಸಿಕ್. ಕಾಂ(indigomusic.com) ಈಗಾಗಲೇ ಹಲವು ಪ್ರತಿಭೆಗಳನ್ನು ಪರಿಚಯಿಸುವ ಜೊತೆಗೆ ವೇದಿಕೆಯನ್ನೂ ಒದಗಿಸಿದೆ. ಇದೀಗ ಇಂಡಿ ಸ್ಕೂಪ್‌ನಲ್ಲಿ ಇಬ್ಬರು ಸಂಗೀತ ಲೋಕದ ಪ್ರತಿಭೆಗಳ ಅನಾವರಣ ಮಾಡಲಾಗಿದೆ. ಮೊದಲಿಗೆ ಇಶಿತಾ ಚಕ್ರವರ್ತಿ. ಈಕೆ ಸಂಗೀತದ ಬಹುತೇಕ ವಾದ್ಯಗಳನ್ನು ನುಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಆಪ್ತರಿಂದ ದೂರವಾಗಿರುವ, ಬಿರುಕು ಮೂಡಿರುವ ಪ್ರೇಮಿಗಳಿಗಾಗಿ ಹಾಡು ರಚಿಸಿ ನಿರ್ದೇಶಿಸಿರುವ ಬೆಂಗಳೂರಿನ ಜೊಯೆಲ್ ಜೇಕಬ್ ಇಂದಿನ ಪ್ರತಿಭಾ ಅನಾವರಣದಲ್ಲಿ ಕಾಣಿಸಿಕೊಂಡಿದ್ದಾರೆ.  

Video Top Stories