Asianet Suvarna News Asianet Suvarna News

ವಿಕ್ರಾಂತ್ ರೋಣ ನಿರ್ಮಾಪಕರಿಂದ ಹೊಸ ಸಿನಿಮಾ ಅನೌನ್ಸ್: ಪಾದರಾಯ ಸಿನಿಮಾ ಫಸ್ಟ್ ಲುಕ್ ಅನಾವರಣ!

ಭಾರತೀಯ ಚಿತ್ರರಂಗಕ್ಕೆ ವಿಕ್ರಾಂತ್ ರೋಣ ಅನ್ನೋ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟ ನಿರ್ಮಾಪಕ ಜಾಕ್ ಮಂಜು ಈಗ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ಅನೌನ್ಸ್‌ ಮಾಡಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ವಿಕ್ರಾಂತ್ ರೋಣ ಅನ್ನೋ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟ ನಿರ್ಮಾಪಕ ಜಾಕ್ ಮಂಜು ಈಗ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ಅನೌನ್ಸ್‌ ಮಾಡಿದ್ದಾರೆ. ಕ್ವಾಲಿಟಿ ಸಿನಿಮಾಗಳನ್ನ ವಿತರಣೆ ಮಾಡಿ ನಿರ್ಮಾಣ ಮಾಡೋ ನಿರ್ಮಾಪಕ ಜಾಕ್ ಮಂಜು ಜೊತೆ ನಿರ್ದೇಶಕ ನಾಗಶೇಖರ್ ಕೂಡ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದು ಜಾಕ್ ಮಂಜು ಜೊತೆ ಕೈ ಜೋಡಿಸಿದ್ದಾರೆ. ವಿಶೇಷ ಅಂದ್ರೆ ಈ ಜೋಡಿಯ ಸಿನಿಮಾವನ್ನ ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾಗೆ ಪಾದರಾಯ ಅಂತ ಟೈಟಲ್ ಇಡಲಾಗಿದೆ. ‘ಪಾದರಾಯ’ ಎಂದರೇ ಹನುಮಂತ. ಅಂಜನಾದ್ರಿ ಸುತ್ತಮುತ್ತ ನಡೆಯುವ ಕಥೆ ಚಿತ್ರಲ್ಲಿದೆ. 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾವಂತೆ. ಆ ಘಟನೆ ಆರು ರಾಜ್ಯಕ್ಕೆ ಸಂಬಂಧಿಸಿದ್ದು, ಯೂನಿವರ್ಸಲ್ ಸಬ್ಜೆಕ್ಟ್ ಆದ್ರಿಂದ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಅಂತ ನಿರ್ಮಾಪಕ ಜಾಕ್ ಮಂಜು ಹಾಗು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ತಿಳಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment