ಕನ್ನಡ ಬಾಕ್ಸಾಫೀಸ್ ಲೂಟಿಯಲ್ಲಿ ಗುರುದೇವ ಹೊಯ್ಸಳ: ಡಾಲಿ ಧನಂಜಯ್‌ಗೆ ಸಿಕ್ತು ಕೋಟಿ ಗಿಫ್ಟ್!

ಒಂದ್ ಕಡೆ ಐಪಿಎಲ್ ಹಬ್ಬ. ಮತ್ತೊಂದ್ ಕಡೆ ಎಕ್ಸಾಂ ಜ್ವರ. ಆದ್ರೆ ಇದಾವುದನ್ನೂ ಲೆಕ್ಕಿಸದೇ ಗುರುದೇವ ಹೊಯ್ಸಳ ಆರ್ಭಟಿಸುತ್ತಿದ್ದಾನೆ. ಯಾವ್ ಎಕ್ಸಾಂ ಬರಲಿ. ಐಪಿಎಲ್ ಇರಲಿ ಬಿಗ್ ಸ್ಕ್ರೀನ್ ಮೇಲೆ ಖಾಕಿ ಸೈರನ್ ಮೊಳಗಿಸುತ್ತಿದ್ದಾರೆ ಡಾಲಿ ಧನಂಜಯ್.

First Published Apr 2, 2023, 8:42 PM IST | Last Updated Apr 2, 2023, 8:42 PM IST

ಒಂದ್ ಕಡೆ ಐಪಿಎಲ್ ಹಬ್ಬ. ಮತ್ತೊಂದ್ ಕಡೆ ಎಕ್ಸಾಂ ಜ್ವರ. ಆದ್ರೆ ಇದಾವುದನ್ನೂ ಲೆಕ್ಕಿಸದೇ ಗುರುದೇವ ಹೊಯ್ಸಳ ಆರ್ಭಟಿಸುತ್ತಿದ್ದಾನೆ. ಯಾವ್ ಎಕ್ಸಾಂ ಬರಲಿ. ಐಪಿಎಲ್ ಇರಲಿ ಬಿಗ್ ಸ್ಕ್ರೀನ್ ಮೇಲೆ ಖಾಕಿ ಸೈರನ್ ಮೊಳಗಿಸುತ್ತಿದ್ದಾರೆ ಡಾಲಿ ಧನಂಜಯ್. ಗುರುವಾರ ರಿಲೀಸ್ ಆಗಿದ್ದ ಗುರುದೇವ ಹೊಯ್ಸಳ ಕನ್ನಡ ಬಾಕ್ಸಾಫೀಸ್ ಲೂಟಿಗೆ ಇಳಿದಿದ್ದಾನೆ. ಥಿಯೇಟರ್‌ಗಳಲ್ಲಿ 'ಹೊಯ್ಸಳ'ನ ಪೊಲೀಸ್ ಗಿರಿ ಜೋರಾಗಿದೆ. ಡಾಲಿಯ 'ಗುರುದೇವ್ ಹೊಯ್ಸಳ'ನಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಥೆ ಹಳೆಯದ್ದೇ ಆದ್ರೂ ಟ್ರೀಟ್‌ಮೆಂಟ್ ಹೊಸದಾಗಿದೆ. ಸಿನಿಮಾ ನೋಡಿದವರೆಲ್ಲಾ ಹೊಯ್ಸಳ Vs ಬಲಿ ಆರ್ಭಟಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದು, ದಿಲ್‌ಖುಷ್ ಆಗಿದ್ದಾರೆ. ಹಾಗಾದ್ರೆ ಗುರುದೇವ ಹೊಯ್ಸಳ ಕಲೆಕ್ಷನ್ ಎಷ್ಟು.? ಅಂತ ನೀವ್ ಕೇಳ್ಬಹುದು. ಅದಕ್ಕೂ ಗಾಂಧಿನಗರದ ಗಲ್ಲಿಯಿಂದ ಒಂದು ಉತ್ತರ ಬಂದಿದೆ. ಮೂರು ದಿನದಲ್ಲಿ ಡಾಲಿ ಬರೋಬ್ಬರಿ 6 ಕೋಟಿ ಬಾಚಿದ್ದಾರೆ ಅಂತ ಹೇಳಲಾಗ್ತಿದೆ. 

ಡಾಲಿ ಧಂನಜಯ್ ಬಡವರ ಮನೆ ಹುಡುಗ. ಸಾಮಾನ್ಯ ಕುಟುಂಬದಿಂದ ಬಂದ ಡಾಲಿ ಇಂದು ಇಂಡಸ್ಟ್ರಿಯಲ್ಲಿ ನಟ ರಾಕ್ಷಸ ಅಂತ ಅಭಿಮಾನಿಗಳಿಂದ ಪುರಸ್ಕಾರ ಪಡೆದಿದ್ದಾರೆ. ಸಕ್ಸಸ್ಗಾಗಿ ಅಲೆದಾಡಿ ಸೋತು ಗೆದ್ದ ಧನಂಜಯ್ ಈಗ ಸ್ಯಾಂಡಲ್ವುಡ್ನ ದೊಡ್ಡ ಅಸ್ಸೆಟ್ ಆಗಿದ್ದಾರೆ. ಮಾಸ್ ಕ್ಲಾಸ್ ಆಡಿಯೆನ್ಸ್ ಫೇವರಿಟ್ ಹೀರೋ ಆಗಿರೋ ಧನಂಜಯ್ ತನ್ನ ಸಿನಿ ಖರಿಯರ್ನ 25ನೇ ಸಿನಿಮಾ ಗುರುದೇವ ಹೊಯ್ಸಳನಾಗಿ ಗೆದ್ದಿದ್ದಾರೆ. ಹೀಗಾಗಿ ಧನಂಜಯ್ ತಂದುಕೊಟ್ಟ ದೊಡ್ಡ ಸಕ್ಸಸ್ಗಾಗಿ ಗುರುದೇವ ಹೊಯ್ಸಳ ಸಿನಿಮಾ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗು ಯೋಗಿ ಜಿ ರಾಜ್ ಧನಂಜಯ್ಗೆ ಕೋಟಿಗೂ ಹೆಚ್ಚು ಬೆಲೆ ಬಾಳೋ ಹೈಟೆಕ್ ಕಾರನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಡಾಲಿ ಧನಂಜಯ್ಗೆ ನಿರ್ಮಾಪಕರ ಕಡೆಯಿಂದ ದುಬಾರಿ ಕಾರು ಗಿಫ್ಟ್ ಸಿಕ್ಕಿದ್ದೇ ತಡ. 

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಖುಷಿ ಪಟ್ಟಿದ್ದು,'ನಿಮ್ಮ ಹೊಸ ಕಾರಿಗಾಗಿ ಧನ್ಯವಾದಗಳು. ಧನು, ಗುರುದೇವ್ ಹೊಯ್ಸಳ ಗೆದ್ದಿದ್ದಕ್ಕೂ ನಿಮ್ಮ ತಂಡಕ್ಕೆ ಅಭಿನಂದನೆಗಳು. ನಮ್ಮನ್ನೆಲ್ಲ ನಿಮ್ಮ ಕಾರಿನಲ್ಲಿ ಕಾರ್ನರ್‌ ಹೌಸ್‌ಗೆ ಕರೆದುಕೊಂಡು ಹೋಗಿ ಟ್ರೀಟ್ ಕೊಡಿಸಿ, ಯಾವಾಗ ಕರ್ಕೊಂಡು ಹೋಗ್ತೀರಾ' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರೋ ಧನಂಜಯ್, 'ಈಗಲೇ, ಈ ಕ್ಷಣದಲ್ಲೇ ಹೋಗಣ ಬನ್ನಿ..' ಎಂದು ರಿಪ್ಲೈ ಮಾಡಿದ್ದಾರೆ. ಅದಕ್ಕೆ ಮತ್ತೊಂದು ಪ್ರತಿಕ್ರಿಯೆ ಕೊಟ್ಟಿರುವ ರಮ್ಯಾ, 'ಸುಮ್ನೆ ಹೇಳಬೇಡಿ, ನಾನು ಐಸ್‌ಕ್ರೀಮ್ ಅಂದ್ರೆ 24/7 ನಾನು ರೆಡಿ ಇರುತ್ತೇನೆ..' ಎಂದಿದ್ದಾರೆ. ಇವರಿಬ್ಬರ ಟ್ವೀಟ್ ಪ್ರೀತಿ ಇಬ್ಬರ ಫ್ಯಾನ್ಸ್ ಬಳಗದಲ್ಲಿ ವೈರಲ್ ಆಗುತ್ತಿವೆ. ಅದೇನೆ ಇರಲಿ ಬಡವರ ಮನೆ ಮಕ್ಕಳು ಬೆಳಿಬೇಕು ಅಂತ ಹೇಳಿಕೊಂಡು ಅದ್ಭುತ ಸಿನಿಮಾಗಳನ್ನ ಕೊಡುತ್ತಾ ನಿರ್ಮಾಪಕರ ಡಾರ್ಲಿಂಗ್ ಆಗಿರೋ ಡಾಲಿ ಈಗ ಒಂದು ಕೋಟಿಗೂ ಹೆಚ್ಚು ಬೆಲೆಬಾಳೋ ಕಾರು ಹೊಂದಿರೋ ಶ್ರೀಮಂತ ಆಗಿದ್ದಾರೆ.