ಆ್ಯಕ್ಷನ್ ಪ್ರಿನ್ಸ್ 'ಕೆಡಿ'ಗೆ ಹೀರೋಯಿನ್ಸ್ ಫಿಕ್ಸ್: ಧ್ರುವಗೆ ನಾಯಕಿ ಸ್ಯಾಂಡಲ್‌ವುಡ್‌ ಶಿಲ್ಪಾ ಶೆಟ್ಟಿ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋದು ಪಕ್ಕಾ ಆಗಿದೆ. ಅದು ಕೆಡಿಯಾಗಿ. ದಿ ಶೋ ಮ್ಯಾನ್ ಪ್ರೇಮ್ ಹಾಗು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬೋ ಬೊಂಬಾಟ್ ಬಾಡೂಟ ಹಾಕೋ ಸಿನಿಮಾ ಕೆಡಿ. 

First Published Apr 2, 2023, 8:22 PM IST | Last Updated Apr 2, 2023, 8:22 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋದು ಪಕ್ಕಾ ಆಗಿದೆ. ಅದು ಕೆಡಿಯಾಗಿ. ದಿ ಶೋ ಮ್ಯಾನ್ ಪ್ರೇಮ್ ಹಾಗು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬೋ ಬೊಂಬಾಟ್ ಬಾಡೂಟ ಹಾಕೋ ಸಿನಿಮಾ ಕೆಡಿ. ಈ ಸಿನಿಮಾ ಶೂಟಿಂಗ್ ಫ್ಲೋರ್ನಲ್ಲಿ ಇರುವಾಗ್ಲೆ ಹೆಜ್ಜೆ ಹೆಜ್ಜೆಗೂ ಸೌಂಡ್ ಮಾಡುತ್ತಿದೆ. ಇಷ್ಟು ದಿನ ಕೆಡಿ ಹೀರೋಯಿನ್ ಯಾರು..? ಅವರ..? ಇವರ.? ಹೊರಗಿನವರ.? ನಮ್ಮವರಾ.? ಅಂತ ಧ್ರವ ಸರ್ಜಾ ಫ್ಯಾನ್ಸ್ ಹುಡುಕಿದ್ದೇ ಹುಡುಕಿದ್ದು. ಭಟ್ ಯಾರು ಅನ್ನೋ ಗುಟ್ಟ ರಟ್ಟಾಗಿರಲಿಲ್ಲ. ಈಗ ಕೆಡಿ ಜೊತೆ ರೊಮ್ಯಾನ್ಸ್ ಮಾಡೋದು ನಾನೆ ಅಂತ ಸ್ಯಾಂಡಲ್ವುಡ್ನ ಶಿಲ್ಪಾ ಶೆಟ್ಟಿ ರೆಡಿಯಾಗಿದ್ದಾರೆ. ಅರೆ ಇವರಾರಪ್ಪಾ ಸ್ಯಾಂಡಲ್‌ವುಡ್‌ ಶಿಲ್ಪಾ ಶೆಟ್ಟಿ ಅಂತೀರಾ..? ಅವರೇ ಏಕ್ ಲವ್ ಯಾ ಚೆಲುವೆ ರೀಷ್ಮಾ ನಾಣಯ್ಯ. ರೀಷ್ಮಾ ನಾಣಯ್ಯ.. ಜೋಗಿ ಪ್ರೇಮ್ ಹುಡುಕಿ ತಂದ ಕಲಾಕೃತಿ ಈ ಚೆಲುವೆ. 

ಏಕ್ ಲವ್ ಯಾ ಸಿನಿಮಾದಲ್ಲಿ ರಾಣ ಜೊತೆ ರೊಮ್ಯಾನ್ಸ್ ಮಾಡಿ ಗಂಡ್ ಹೈಕ್ಳ ಹಾರ್ಟ್ ಗೆದ್ದಿದ್ದ ರೀಷ್ಮಾ ನಾಣಯ್ಯ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿಯಂತೆ ಫಿಝಿಕ್ಸ್ ಇರೋ ಬ್ಯೂಟಿ ಅಂತ ಕರೆಸಿಕೊಂಡಿದ್ರು. ರೀಷ್ಮಾ ಬ್ಯೂಟಿಗೆ ಪಡ್ಡೆ ಹುಡುಗ್ರು ಅಬ್ಬಬ್ಬಾ ಅಂದಿದ್ರು. ಅಲ್ಲಿಂದ  ಸ್ಯಾಂಡಲ್‌ವುಡ್‌ ಶಿಲ್ಪಾ ಶೆಟ್ಟಿ ಅಂತ ಕರೆಸಿಕೊಂಡ ರೀಷ್ಮಾ ಈಗ ಕೆಡಿ ಧ್ರುವ ಸರ್ಜಾಗೆ ನಾನೇ ಹೀರೋಯಿನ್ ಎಂದಿದ್ದಾರೆ. ಕೆಡಿ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಈ ಸಿನಿಮಾದ ಮೈನ್ ಕ್ಯಾರೆಕ್ಟರ್ ಒಂದಕ್ಕೆ ನಿರ್ದೇಶಕ ಜೋಗಿ ಪ್ರೇಮ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನ ಕರೆ ತಂದಿದ್ದಾರೆ. ಶಿಲ್ಪಾ ಶೆಟ್ಟಿ ಲುಕ್ ಕೂಡ ರಿವೀಲ್ ಆಗಿದೆ.  ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಮಿಂಚುತ್ತಿದ್ದಾರೆ. ಸಂಜಯ್ ದತ್ ಈಗಾಗ್ಲೆ ಚಿತ್ರೀಕರಣಕ್ಕೆ ಬಂದು ಹೋಗಿದ್ದಾರೆ. ಈಗ ಕೆಡಿ ಹೀರೋಯಿನ್ ಕೂಡ ಫೈನಲ್ ಆಗಿದ್ದು, ರೀಷ್ಮಾ ನಾಣಯ್ಯ ಧ್ರುವ ಸರ್ಜಾ ಜೊತೆ 80ರ ದಶಕದ ಸೌಂದರ್ಯದಲ್ಲಿ ತೆರೆದುಕೊಳ್ಳಲಿದ್ದಾರೆ.