ಕಾಂತಾರ ಚೆಲುವೆ ಒಂದು ಸಿನಿಮಾ ಸಂಭಾವನೆ ಎಷ್ಟು?: ಯುವ ಸಿನಿಮಾಗೆ ಸಪ್ತಮಿ ಗೌಡ ಪಡೆದದ್ದು ಎಷ್ಟು?
ಇತ್ತೀಚೆಗಷ್ಟೇ ದೊಡ್ಮನೆಯ ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‌ಕುಮಾರ್ ಅವರ ಸಿನಿಮಾ ಲಾಂಚ್ ಆಗಿತ್ತು. ಈ ಸಿನಿಮಾಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿದ್ದು, ಸಿನಿಮಾ ಸಂಭಾವನೆ ಎಷ್ಟು ಪಡೆದಿದ್ದಾರೆ ಗೊತ್ತಾ?
ಇತ್ತೀಚೆಗಷ್ಟೇ ದೊಡ್ಮನೆಯ ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‌ಕುಮಾರ್ ಅವರ ಸಿನಿಮಾ ಲಾಂಚ್ ಆಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಮುಹೂರ್ತ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಟೀಮ್, ಚಿತ್ರಕ್ಕೆ 'ಯುವ' ಇಟ್ಟಿತ್ತು. ಜೊತೆಗೆ ಟೈಟಲ್ ಟೀಸರ್ ಅನ್ನು ಕೂಡ ರಿಲೀಸ್ ಮಾಡಿತ್ತು. ಇದೀಗ ಈ ಸಿನಿಮಾಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ. ಯುವ ಸಿನಿಮಾಗೆ ಸಪ್ತಮಿ ಗೌಡ ಸುಮಾರು 40 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಕಾಂತಾರ ನಾಯಕಿಯ ಸಂಭಾವನೆ ಹೆಚ್ಚು ಕಡಿಮೆ ಅರ್ಧ ಕೋಟಿಗೆ ಏರಿತಾ ಎಂಬ ಆಶ್ಚರ್ಯ ಮೂಡಿದೆ.