ಟಾಪ್ ಟ್ರೆಂಡಿಂಗ್‌ನಲ್ಲಿ ಆಕ್ಷನ್ ಪ್ರಿನ್ಸ್ 'ಮಾರ್ಟಿನ್' ಟೀಸರ್: 12 ಗಂಟೆಯಲ್ಲಿ 12 ಮಿಲಿಯನ್ ವೀಕ್ಷಣೆ!

ಮಾರ್ಟಿನ್ ಸಿನಿಮಾದ ಟೀಸರ್ 17 ಗಂಟೆಯಲ್ಲಿ ಬರೋಬ್ಬರಿ 1.7 ಕೋಟಿ ಬಾರಿ ವೀಕ್ಷಣೆ ಪಡೆದಿದೆ. ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಈ ಚಿತ್ರದ ಟೀಸರ್ನಿಂದ ಹೆಚ್ಚಿದೆ. ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ನಂ1 ಸ್ಥಾನ ಗಳಿಸಿದ್ದು ಮಾರ್ಟಿನ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಟ್ರೆಂಡ್ ಹೆಚ್ಚಿದೆ.

First Published Feb 25, 2023, 10:54 AM IST | Last Updated Feb 25, 2023, 10:54 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ ಆಗಿದೆ. ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ. ಭರ್ಜರಿ ಮೈಕಟ್ಟಿನ ಧ್ರುವ ಸರ್ಜಾ ವೈರಿಗಳನ್ನು ಕುಟ್ಟಿ ಪುಡಿ ಮಾಡುತ್ತಿರುವ ದೃಶ್ಯಗಳು ಟೀಸರ್ ತುಂಬ ಇದ್ದು, ಅಭಿಮಾನಿಗಳಲ್ಲಿ ಥ್ರಿಲ್ ಆಗಲು ಸಾಕಷ್ಟು ಸರಕನ್ನು ಟೀಸರ್ ಮೂಲಕ ನಿರ್ದೇಶಕ ಎಪಿ ಅರ್ಜುನ್ ನೀಡಿದ್ದಾರೆ. ಮಾರ್ಟಿನ್ ಟೀಸರ್ಗೆ ಒಂದು ಗಂಟೆಗೆ ಒಂದು ಮಿಲಿಯನ್ ವ್ಯೂಸ್ ಅನ್ನೊ ರೀತಿ 12 ಮಿಲಿಯನ್ ಬಂದಿದೆ. ಅಲ್ಲಿಗೆ ಇಡೀ ಚಿತ್ರದ ಈ ಟೀಸರ್ ಮೋಡಿ ಎಷ್ಟಿದೆ ಅಂತ ಅಂದಾಜು ಮಾಡಬಹುದು. 

ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾನ ತೆರೆಗೆ ತರಲು ಏನೆಲ್ಲ ಸಿದ್ಧತೆ ಬೇಕೋ ಅದನ್ನು ಮಾಡಿಕೊಂಡು ‘ಮಾರ್ಟಿನ್’ ತಂಡ ರೆಡಿ ಆಗಿದೆ. ಸದ್ಯ ಟೀಸರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ‘ಕನ್ನಡ ಚಿತ್ರರಂಗದಿಂದ ಮತ್ತೊಂದು ಭರವಸೆಯ ಸಿನಿಮಾ ಬರುತ್ತಿದೆ’ ಎನ್ನುವ ಕಮೆಂಟ್ಗಳು ಬರುತ್ತಿವೆ. ಮಾರ್ಟಿನ್ ಸಿನಿಮಾದ ಟೀಸರ್ 17 ಗಂಟೆಯಲ್ಲಿ ಬರೋಬ್ಬರಿ 1.7 ಕೋಟಿ ಬಾರಿ ವೀಕ್ಷಣೆ ಪಡೆದಿದೆ. ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಈ ಚಿತ್ರದ ಟೀಸರ್ನಿಂದ ಹೆಚ್ಚಿದೆ. ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ನಂ1 ಸ್ಥಾನ ಗಳಿಸಿದ್ದು ಮಾರ್ಟಿನ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. 

ಇತ್ತೀಚೆಗೆ ಪ್ಯಾನ್ ಇಂಡಿಯಾ ಟ್ರೆಂಡ್ ಹೆಚ್ಚಿದೆ. ಕನ್ನಡದ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ‘ಕೆಜಿಎಫ್ 2’, ‘ಕಾಂತಾರ’ ಮೊದಲಾದ ಸಿನಿಮಾಗಳು ಐದು ಭಾಷೆಗಳಲ್ಲಿ ರಿಲೀಸ್ ಆಗಿ ಸದ್ದು ಮಾಡಿವೆ. ಈಗ ‘ಮಾರ್ಟಿನ್’ ಚಿತ್ರದ ಸರದಿ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾನ ತೆರೆಗೆ ತರಲು ಏನೆಲ್ಲ ಸಿದ್ಧತೆ ಬೇಕೋ ಅದನ್ನು ಮಾಡಿಕೊಂಡು ‘ಮಾರ್ಟಿನ್’ ತಂಡ ರೆಡಿ ಆಗಿದೆ. ಸದ್ಯ ಟೀಸರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಮಾರ್ಟಿನ್ ಸಿನಿಮಾದ ಕಥೆ ರೆಟ್ರೋ ಶೈಲಿಯಲ್ಲಿ ಸಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ. ಧ್ರುವ ಸರ್ಜಾ ಅವರು ಸಖತ್ ಆ್ಯಕ್ಷನ್ ಮೆರೆದಿದ್ದಾರೆ. ಪಾಕಿಸ್ತಾನದ ಉಗ್ರರು, ಐಎಸ್ಐ, ಅಲ್ಲಿನ ಮಿಲಿಟರಿ ವಿಚಾರ ಇಟ್ಟುಕೊಂಡು ಬಾಲಿವುಡ್ ಮಂದಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. 

ಆದರೆ, ಕನ್ನಡದವರು ಈ ವಿಚಾರವನ್ನು ಹೆಚ್ಚು ಟಚ್ ಮಾಡಿಲ್ಲ. ಈಗ ‘ಮಾರ್ಟಿನ್’ ಚಿತ್ರದ ಮೂಲಕ ಹಾಗೊಂದು ಪ್ರಯತ್ನ ನಡೆಯುವ ಸೂಚನೆ ಸಿಕ್ಕಿದೆ. ಧ್ರುವ ಸರ್ಜಾ ಅವರ ಬಾಡಿ ಸಾಕಷ್ಟು ಗಮನ ಸೆಳೆದಿದೆ. ಟೀಸರ್ನಲ್ಲಿ ಚಿತ್ರದ ಭರ್ಜರಿ ಆ್ಯಕ್ಷನ್ಗಳ ಝಲಕ್ ಸಿಕ್ಕಿದೆ. ಧ್ರುವ ಸರ್ಜಾ ಪಾತ್ರ ಪರಿಚಯವೂ ಆಗಿದೆ. ಇದರಲ್ಲಿ ಆ ಪಾತ್ರದ ಕ್ರೌರ್ಯ ಕಾಣುತ್ತದೆ. ಆದರೆ ಈ ಕ್ರೌರ್ಯ ಯಾತಕ್ಕಾಗಿ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿಯೇ ಇದೆ. ಡೈರೆಕ್ಟರ್ ಎ.ಪಿ.ಅರ್ಜುನ್ ಅದನ್ನ ಸದ್ಯಕ್ಕೆ ಟೀಸರ್ನಲ್ಲಿ ಬಿಟ್ಟುಕೊಟ್ಟಿಲ್ಲ. ಹಾಗೇನೆ ಎಲ್ಲವೂ ಹೇಳದೆ ಎಲ್ಲದರ ಝಲಕ್ ಕೊಟ್ಟಿದ್ದಾರೆ. ಎಪಿ ಆರ್ಜುನ್ ನಿರ್ದೇಶನದ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚಿದೆ. ಬಚ್ಚನ್ ನಿರ್ಮಾಪಕ ಉದಯ್ ಮೆಹ್ತಾ ಈಬಾರಿ ಬಾಕ್ಸಾಫೀಸ್ನಲ್ಲಿ ಭಜರಿ ಕಮಾಯಿ ಮಾಡೊ ಲಕ್ಷಣಗಳೂ ಮಾರ್ಟಿನ್ ರಿಲೀಸ್ ಗೂ ಮೊದಲೆ ಕಾಣುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment