KD ಟೀಸರ್ ರೆಕಾರ್ಡ್ ಬ್ರೇಕ್: 21 ಮಿಲಿಯನ್ ಜನರ ವೀಕ್ಷಣೆ

ಕೆಡಿ.. ಟೈಟಲ್ ಬೆಂಕಿ ಆಗಿಯೇ ಇದೆ. ಇಡೀ ಟೀಸರ್‌ನಲ್ಲಿ ಬೆಂಕಿನೇ ಇದೆ. ಧ್ರುವ ಸರ್ಜಾ ಎಂಟ್ರಿಯಲ್ಲೂ ಸುತ್ತ-ಮುತ್ತಲು ಬೆಂಕಿನೇ ಇದೆ. ಕೈಯಲ್ಲಿ ಮಚ್ಚು ಕೂಡ ಇದೆ. ಲುಕ್ ಅಲ್ಲೂ ಸಖತ್ ರಗಢ್ ಫೀಲ್ ಕೂಡ ಕಾಣುತ್ತದೆ. ಇತ್ತೀಚೆಗಷ್ಟೇ ರಿಲೀಸ್ ಆದ ಕೆಡಿ ಟೀಸರ್ ದೊಡ್ಡ ದಾಖಲೆ ಬರೆದಿದೆ. ಇಲ್ಲಿಯವರೆಗೆ 21 ಮಿಲಿಯನ್ ಜನ ಟೀಸರ್ ವೀಕ್ಷಿಸಿದ್ದಾರೆ. 

First Published Oct 27, 2022, 8:28 PM IST | Last Updated Oct 27, 2022, 8:28 PM IST

ಕೆಡಿ.. ಟೈಟಲ್ ಬೆಂಕಿ ಆಗಿಯೇ ಇದೆ. ಇಡೀ ಟೀಸರ್‌ನಲ್ಲಿ ಬೆಂಕಿನೇ ಇದೆ. ಧ್ರುವ ಸರ್ಜಾ ಎಂಟ್ರಿಯಲ್ಲೂ ಸುತ್ತ-ಮುತ್ತಲು ಬೆಂಕಿನೇ ಇದೆ. ಕೈಯಲ್ಲಿ ಮಚ್ಚು ಕೂಡ ಇದೆ. ಲುಕ್ ಅಲ್ಲೂ ಸಖತ್ ರಗಢ್ ಫೀಲ್ ಕೂಡ ಕಾಣುತ್ತದೆ. ಇತ್ತೀಚೆಗಷ್ಟೇ ರಿಲೀಸ್ ಆದ ಕೆಡಿ ಟೀಸರ್ ದೊಡ್ಡ ದಾಖಲೆ ಬರೆದಿದೆ. ಇಲ್ಲಿಯವರೆಗೆ 21 ಮಿಲಿಯನ್ ಜನ ಟೀಸರ್ ವೀಕ್ಷಿಸಿದ್ದಾರೆ. ಜೋಗಿ ಪ್ರೇಮ್ ತಮ್ಮಕೆಡಿ ಚಿತ್ರದ ಟೈಟಲ್ ಲಾಂಚ್‌ಗಾಗಿಯೇ ದೊಡ್ಡ ಕಾರ್ಯಕ್ರಮವನ್ನೆ ಮಾಡಿದ್ದರು. ಬಾಲಿವುಡ್‌ನಿಂದ ಸಂಜಯ್ ದತ್ ಇದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದರು. ಮಾಲಿವುಡ್‌ನ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಮಲಯಾಳಂ ಟೀಸರ್‌ಗೆ ವಾಯ್ಸ್ ಕೊಟ್ಟಿದ್ದರು. ತಮಿಳಿನ ನಟ ವಿಜಯ್ ಸೇತುಪತಿ ತಮಿಳು ಟೀಸರ್‌ಗೆ ವಾಯ್ಸ್ ಕೊಟ್ಟಿದ್ದರು. ಹಿಂದಿಯಲ್ಲಿ ಸಂಜಯ್ ದತ್ ಸ್ವತಃ ವಾಯ್ಸ್ ಡಬ್ ಮಾಡಿ ಟೀಸರ್ ರಿಲೀಸ್ ಮಾಡಿದ್ದರು. ಇದೀಗ ಸಿನಿಮಾ ಟೀಸರ್ ಭರ್ಜರಿ ಸೌಂಡ್ ಮಾಡುತ್ತಿದೆ. ಕೆಡಿಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತದಂತೆ. ಈ ಹಿನ್ನೆಲೆಯಲ್ಲಿಯೇ ಸಿನಿಮಾದ ಟೈಟಲ್ ಟೀಸರ್ ಬಹು ಭಾಷೆಯಲ್ಲಿಯೇ ರಿಲೀಸ್ ಆಗಿತ್ತು. ಕೆಡಿ ಪಾತ್ರಧಾರಿ ಧ್ರುವ ಲುಕ್ ಕೂಡ ಖದರ್ರಾಗಿದೆ. ಧ್ರುವ-ಪ್ರೇಮ್ ಸಿನಿಮಾಗೆ ಟೀಸರ್‌ಗೆ ಸಿಕ್ಕಿರೊ ಪ್ರತಿಕ್ರಿಯೆ ನೋಡಿದರೆ ಭಾರೀ ಪ್ರಶಂಸೆ ಸಿಕ್ಕಂತಾಗಿದೆ. ಮುಂದೆ ಹೀರೋಯಿನ್ ಅನೌನ್ಸ್‌ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment