ಡೆಡ್ಲಿ ಡೇಂಜರ್: ರೀಲ್ಸ್ ಶೋಕಿಗೆ ಕರೆಂಟ್ ಜೊತೆ ಯುವತಿ ಹುಚ್ಚಾಟ: ಕೈ-ಕಾಲು.. 4 ಸೂಪರ್ ಬೈಕ್.. ಬಾಹುಬಲಿ ಪವರ್..!
ದುರಂತಗಳಿಗೆ ದೃಶ್ಯಗಳೇ ಸಾಕ್ಷಿ. ಸಾವು.. ನೋವು.. ನಲಿವು.. ಹೀಗೆ ಹಲವು ಭಾವನೆಗಳ ವಿಡಿಯೋ ಪ್ರಪಂಚದಲ್ಲೇ ನಮ್ಮ, ನಿಮ್ಮ ಬದುಕು ಸಾಗ್ತಿದೆ. ಕೆಲ ವಿಡಿಯೋಗಳು ಮನ ಕರಿಗಿಸುತ್ವೆ..ಕಣ್ಣಂಚಲ್ಲಿ ನೀರು ತರಿಸುತ್ವೆ. ಇನ್ನೂ ಕೆಲ ವಿಡಿಯೋಗಳು ಎದೆಯನ್ನ ಝಲ್ ಅನ್ನಿಸಿ ಬಿಡುತ್ವೆ.
ದುರಂತಗಳಿಗೆ ದೃಶ್ಯಗಳೇ ಸಾಕ್ಷಿ. ಸಾವು.. ನೋವು.. ನಲಿವು.. ಹೀಗೆ ಹಲವು ಭಾವನೆಗಳ ವಿಡಿಯೋ ಪ್ರಪಂಚದಲ್ಲೇ ನಮ್ಮ, ನಿಮ್ಮ ಬದುಕು ಸಾಗ್ತಿದೆ. ಕೆಲ ವಿಡಿಯೋಗಳು ಮನ ಕರಿಗಿಸುತ್ವೆ..ಕಣ್ಣಂಚಲ್ಲಿ ನೀರು ತರಿಸುತ್ವೆ. ಇನ್ನೂ ಕೆಲ ವಿಡಿಯೋಗಳು ಎದೆಯನ್ನ ಝಲ್ ಅನ್ನಿಸಿ ಬಿಡುತ್ವೆ. ಮಗದೊಂದಿಷ್ಟು ವಿಡಿಯೋಗಳು ಮುಖದಲ್ಲಿ ಸಣ್ಣದಾದ ಮಂದಹಾಸವನ್ನ ಮೂಡಿಸುತ್ವೆ. ಅಂತಹ ಒಂದಿಷ್ಟು ವಿಡಿಯೋಗಳೊಟ್ಟಿಗೆ ನಾವು ನಿಮ್ಮ ಮುಂದೆ ಬಂದಿದ್ದೇವೆ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್. ಬೆಂಕಿ ಅಂದ್ರೆ ಮಾರುದ್ದ ಓಡೋ ಜನರಿದ್ದಾರೆ. ಯಾಕೆಂದ್ರೆ ಬೆಂಕಿ ಹುಟ್ಟಿಸಿರುವಂತಹ ಭಯ ಅಂತದ್ದು. ಅಗ್ನಿ ಹೇಗೆ ಹೊತ್ತಿಕೊಳ್ತು ಅನ್ನೋದೇ ಗೊತ್ತಾಗಲ್ಲ. ನೋಡ್ ನೋಡ್ತಲೇ ಧಗಧಗಸಿ ಎಲ್ಲವನ್ನೂ ಭಸ್ಮ ಮಾಡಿ ಬಿಡುತ್ತೆ.
ಪೋಷಕರೇ ಎಚ್ಚರ.. ಎಚ್ಚರ.. ಮಕ್ಕಳನ್ನ ಮನೆಯಾಚೆ ಆಟವಾಡೋಕೆ ಬಿಡುವುದಕ್ಕೂ ಮುನ್ನ ಎಚ್ಚರ. ಈ ಮಾತನ್ನ ಆಗಾಗ ಹೇಳ್ತಲೇ ಇರ್ತೀವಿ. ಈಗ ಮತ್ತೊಮ್ಮೆ ಹೇಳಲೇ ಬೇಕು ಅನ್ನಿಸ್ತು. ಯಾಕೆಂದ್ರೆ ಮಹಾರಾಷ್ಟ್ರದಲ್ಲಿ ನಡೆದಿರೋ ಒಂದು ಘಟನೆಯ ವಿಡಿಯೋ ನೋಡಿದ್ರೆ ಜೀವ ಝಲ್ ಅನ್ನತ್ತೆ. ಅಂತದ್ದು ಏನಾಗಿದೆ ಅಂತ ತೋರಿಸ್ತೀವಿ. ಅದರ ಜೊತೆಗೆ ಒಬ್ಬಳು ಯುವತಿ ರೀಲ್ಸ್ ಶೋಕಿಗಾಗಿ ಪ್ರಾಣವನ್ನೇ ರಿಸ್ಕ್ನಲ್ಲಿ ಇಟ್ಟಿದ್ದಾಳೆ. ಸ್ಲೋ ವಾಕ್.. ಮೂನ್ ವಾಕ್.. ಕ್ಯಾಟ್ ವಾಕ್.. ಹೀಗೆ ಏನೇನೋ ವಾಕ್ಗಳನ್ನ ಬಗ್ಗೆ ನೀವು ಕೇಳಿದ್ದೀರಿ, ನೋಡಿದ್ದೀರಿ. ಆದ್ರೆ ಎಂದಾದ್ರೂ ಬಲ್ಬ್ ವಾಕ್ ನೋಡಿದ್ದೀರಾ..? ಅಥವಾ ಅದ್ರೆ ಬಗ್ಗೆ ಏನಾದ್ರೂ ಕೇಳಿದ್ದೀರಾ.? ಇಲ್ಲೊಬ್ಬಳು ಲೇಡಿ ಬಲ್ಬ್ಗಳ ಮೇಲೆ ವಾಕ್ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾಳೆ.
ಇನ್ನು, ಮತ್ತೊಬ್ಬನಂತೂ ಗಾಜಿನ ಬಾಟಲಿಗಳ ಮೇಲೆ ಬ್ಯಾಲೆನ್ಸ್ ಮಾಡ್ಕೊಂಡು ನಡೆದು ಇತಿಹಾಸ ಸೃಷ್ಟಿಸಿದ್ದಾನೆ. ಸೂಪರ್ ಬೈಕ್ಗಳನ್ನ ಕೈ ಕಾಲುಗಳಿಗೆ ಕಟ್ಟಿ ಎಳದ್ರೂ, ಆತನ ಛುಪ್ ಅನ್ನದೇ ಮಲಗಿದ್ದ. ಅವನ ತಾಕತ್ತು ಕಂಡು ಅಲ್ಲಿದ್ದ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ರು. ಎದೆ ಝಲ್ ಎನ್ನುವ ಆ ವಿಡಿಯೋವನ್ನು ತೋರಿಸ್ತೀವಿ. ತಾಕತ್ತು ಅಂದ್ರೆ ಅವನದ್ದು.. ಆ ವಿಡಿಯೋ ನೋಡಿದ್ರೆ ನೀವು ಕೂಡ ಇದೇ ಮಾತನ್ನ ಹೇಳ್ತೀರಾ.. ಹೌದಾ..? ಹಾಗಿದ್ರೆ ಯಾರವನು..? ಆತ ಅಂತದ್ದು ಏನ್ ಮಾಡಿದ್ದಾನೆ ಅನ್ನೋ ಕುತೂಹಲದ ಪ್ರಶ್ನೆ ಈಗ ನಿಮ್ಮಲ್ಲಿ ಕಾಡ್ತಿರಬಹುದು. ಹಾಗಿದ್ರೆ ಬನ್ನಿ, ಆತ ಮಾಡಿದ್ದೇನು ಅಂತ ತೋರಿಸ್ತೀವಿ. ಅದ್ರ ಜೊತೆ ಜೊತೆಗೆ ಡ್ರೂನ್ ಶೋ ಒಂದರ ಅದ್ಭುತವಾದ ವಿಡಿಯೋನು ಇದೆ.