Asianet Suvarna News Asianet Suvarna News

Head Bush Controversy: ಯಾವುದೇ ಕಾರಣಕ್ಕೂ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕಲ್ಲ: ಅಗ್ನಿ ಶ್ರೀಧರ್‌

ಹೆಡ್‌ಬುಷ್‌ ಚಿತ್ರದಲ್ಲಿ ವೀರಗಾಸೆ ಕಲಾವಿದರಿರುವ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಕೆಲವೊಂದು ಸಂಘಟನೆಗಳು ಆಗ್ರಹಿಸಿದ್ದು, ಯಾವುದೇ ಕಾರಣಕ್ಕೂ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕಲ್ಲ ಎಂದು ಅಗ್ನಿ ಶ್ರೀಧರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

First Published Oct 27, 2022, 2:10 AM IST | Last Updated Oct 27, 2022, 2:10 AM IST

ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡಿರುವ ಹೆಡ್‌ಬುಷ್‌ ಸಿನಿಮಾ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದೆ. ಜಯರಾಜ್‌ ಬೆಂಗಳೂರು ಜಾತ್ರೆವೊಂದರಲ್ಲಿ ಸ್ನೇಹಿತನ ಜೊತೆ ಕುಣಿದು ಕುಪ್ಪಳಿಸುವಾಗ ನಕಲಿ ವೀರಗಾಸೆಗಳು ಹಲ್ಲೆ ಮಾಡುತ್ತಾರೆ. ನೂರಾರು ರೀತಿಯಲ್ಲಿ ಯೋಚನೆ ಮಾಡಿದ ಆ ಮೇಲೆ ಜಯರಾಜ್‌ ಹಲ್ಲೆ ಮಾಡಲು ಮುಂದಾಗುತ್ತಾರೆ. ಇದೀಗ ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿರುವ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಕೆಲವೊಂದು ಸಂಘಟನೆಗಳು ಆಗ್ರಹಿಸಿದ್ದು, ಯಾವುದೇ ಕಾರಣಕ್ಕೂ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕಲ್ಲ ಎಂದು ಅಗ್ನಿ ಶ್ರೀಧರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. ಜೊತೆಗೆ ಮೊದಲು ಚಿತ್ರವನ್ನು ನೋಡಲಿ ಆಮೇಲೆ ರಿಯಾಕ್ಟ್ ಮಾಡಲಿ. ಇದಕ್ಕಾಗಿ ನಾನು ಸಂವಾದಕ್ಕೂ ಸಿದ್ಧನಿದ್ದೇನೆ ಎಂದು ಅಗ್ನಿ ಶ್ರೀಧರ್‌ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment