Asianet Suvarna News Asianet Suvarna News

Ramya: ಗಂಧದ ಗುಡಿ ನೋಡಿ 'ಮಿಸ್‌ ಯು ಅಪ್ಪು' ಎಂದ ರಮ್ಯಾ!

ನಟಿ ರಮ್ಯಾ ಗಂಧದ ಗುಡಿ ಪ್ರೀಮಿಯರ್​ ಶೋ ವೀಕ್ಷಿಸಿ ಅಪ್ಪು ಬಗ್ಗೆ ಮಾತನಾಡಿದ್ದಾರೆ .ಒಂದೊಳ್ಳೆ ಜೀವನ ಪಾಠವನ್ನು ಅಪ್ಪು ನಮ್ಮೆಲ್ಲರಿಗೂ ತಿಳಸಿ ಹೋಗಿದ್ದಾರೆ. ಅವರಂತೆ ನಾವು ಬದುಕೋಣ. ಎಲ್ಲರೂ ಈ ಸಿನಿಮಾವವನ್ನು ನೋಡಬೇಕು ಎಂದು ಹೇಳಿದ್ದಾರೆ.

First Published Oct 28, 2022, 1:20 AM IST | Last Updated Oct 28, 2022, 1:20 AM IST

ಅಕ್ಟೋಬರ್​ 28ರಂದು ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ಚಿತ್ರ ಗಂಧದ ಗುಡಿ ಸಾಕ್ಷ್ಯಚಿತ್ರ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಅಕ್ಟೋಬರ್​ 27ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಯಿತು. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ದೊಡ್ಡ ಪರದೆ ಮೇಲೆ  ಗಂಧದ ಗುಡಿ ನೋಡಿ ಎಲ್ಲರೂ ಎಮೋಷನಲ್​ ಆಗಿದ್ದಾರೆ. ನಟಿ ರಮ್ಯಾ ಕೂಡ ಪ್ರೀಮಿಯರ್​ ಶೋ ವೀಕ್ಷಿಸಿ ಅಪ್ಪು ಬಗ್ಗೆ ಮಾತನಾಡಿದ್ದಾರೆ .ಒಂದೊಳ್ಳೆ ಜೀವನ ಪಾಠವನ್ನು ಅಪ್ಪು ನಮ್ಮೆಲ್ಲರಿಗೂ ತಿಳಸಿ ಹೋಗಿದ್ದಾರೆ. ಅವರಂತೆ ನಾವು ಬದುಕೋಣ. ಎಲ್ಲರೂ ಈ ಸಿನಿಮಾವವನ್ನು ನೋಡಬೇಕು. ವಿಶೇಷವಾಗಿ ಮಕ್ಕಳು ಈ ಸಿನಿಮಾವನ್ನು ನೋಡಲೇಬೇಕು. ಪ್ಲಾಸ್ಟಿಕ್ ಬಗ್ಗೆ, ಕಾಡಿನ ಬಗ್ಗೆ, ಪ್ರಾಣಿಗಳು ಇರಬಹುದು, ಪ್ರತಿಯೊಂದರ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಅಪ್ಪು ಅವರನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ. ಪುನೀತ್​ ರಾಜ್​ಕುಮಾರ್​ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಮ್ಯಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories